ನೇಪಾಳ: ಭೂಕುಸಿತಕ್ಕೆ 12 ಬಲಿ, 19 ಮಂದಿ ನಾಪತ್ತೆ

Update: 2020-07-10 17:49 GMT

 ಕಠ್ಮಂಡು,ಜು.10: ಪಶ್ಚಿಮ ನೇಪಾಳದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಹಾಗೂ ಇತರ 19 ಮಂದಿ ನಾಪತ್ತೆಯಾಗಿದ್ದಾರೆಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಕಾಸ್ಕಿ ಜಿಲ್ಲೆಯ ಪೊಖಾರಾ ನಗರ ಸಾರಂಗ್ಕೋಟ್ ಹಾಗೂ ಹೇಮಜನ್ ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಪೊಖಾರದ ಸಾರಂಗ್ಕೋಟ್ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಭೂಕುಸಿತದಿಂದಾಗಿ ಮನೆಯೊಂದು ನೆಲಸಮಾಧಿಯಾಗಿದ್ದು, ಅದರಲ್ಲಿದ್ದ ಐದು ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News