ತೂತುಕುಡಿ ತಂದೆ-ಮಗನ ಕಸ್ಟಡಿ ಸಾವು ಪ್ರಕರಣದ ಬಗ್ಗೆ ವಿಶ್ವಸಂಸ್ಥೆ ಪ್ರತಿಕ್ರಿಯೆ

Update: 2020-07-12 16:40 GMT

ನ್ಯೂಯಾರ್ಕ್: ಪ್ರತಿ ಸಾವಿನ ಬಗ್ಗೆಯೂ ಕೂಲಂಕಷವಾದ ತನಿಖೆ ನಡೆಯುವುದು ಅಗತ್ಯ ಎಂದು ತೂತುಕುಡಿ ಲಾಕಪ್ ಸಾವಿನ ಪ್ರಕರಣ ಕುರಿತಂತೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಯವರ ವಕ್ತಾರ ಸ್ಟೀಫನ್ ಡುಜಾರಿಕ್ ಪ್ರತಿಕ್ರಿಯಿಸಿದ್ದಾರೆ.

“ತಾತ್ವಿಕವಾಗಿ ಪ್ರತಿ ಸಾವಿನ ಬಗ್ಗೆಯೂ, ಎಲ್ಲ ಪ್ರಕರಣಗಳ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು” ಎಂದು ತಮಿಳುನಾಡಿನ ಪೊಲೀಸರ ದೌರ್ಜನ್ಯಕ್ಕೆ ತಂದೆ ಮಗ ಬಲಿಯಾದ ಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಲಾಕ್ ಡೌನ್ ಉಲ್ಲಂಘಿಸಿ ಅಂಗಡಿ ತೆರೆದ ಆರೋಪದಲ್ಲಿ ಜೂನ್ 19ರಂದು ಜಯರಾಜ್ (59) ಹಾಗೂ ಅವರ ಪುತ್ರ ಬೆನಿಕ್ಸ್ (31) ಅವರನ್ನು ಬಂಧಿಸಿ ಕೋವಿಲ್ಪಟ್ಟಿ ಉಪ ಕಾರಾಗೃಹದಲ್ಲಿ ಇರಿಸಲಾಗಿತ್ತು. ಪೊಲೀಸರು ನಡೆಸಿದ್ದಾರೆ ಎನ್ನಲಾದ ದೌರ್ಜನ್ಯದಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News