ಲಾರಾ ದಾಖಲೆಯನ್ನು ಹಿಂದಿಕ್ಕಿದ ಹೋಲ್ಡರ್

Update: 2020-07-14 08:42 GMT

ಸೌತಾಂಪ್ಟನ್: ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಜಯ ದಾಖಲಿಸುವ ಮೂಲಕ ನಾಯಕ ಜೇಸನ್ ಹೋಲ್ಡರ್ ಅವರು ಮಾಜಿ ನಾಯಕ ಬ್ರಿಯಾನ್ ಲಾರಾ ಅವರ ಗೆಲುವಿನ ದಾಖಲೆಯನ್ನು ಹಿಂದಿಕ್ಕಿದ್ದಾರೆ.

 ಲಾರಾ ನಾಯಕತ್ವ ವಹಿಸಿದ್ದ 47 ಟೆಸ್ಟ್ ಪಂದ್ಯಗಳಲ್ಲಿ ಕೇವಲ 10 ಪಂದ್ಯಗಳನ್ನು ವಿಂಡೀಸ್ ಜಯ ಗಳಿಸಿತ್ತು. ಆದರೆ ಹೋಲ್ಡರ್ ನಾಯಕತ್ವದಲ್ಲಿ ವಿಂಡೀಸ್ 33 ಟೆಸ್ಟ್ ಗಳಲ್ಲಿ 11ರಲ್ಲಿ ಜಯಗಳಿಸಿದೆ.

 1995ರ ಮೊದಲು ವಿಂಡೀಸ್ 15 ವರ್ಷಗಳ ಅವಧಿಯಲ್ಲಿ ಸತತ 29 ಟೆಸ್ಟ್ ಸರಣಿಯಲ್ಲಿ ಅಜೇಯವಾಗಿತ್ತು. 1980 ರ ದಶಕದಲ್ಲಿ ಅದರ ಪ್ರಾಬಲ್ಯವನ್ನು ಗಮನಿಸಿದರೆ, ಈ ಅತ್ಯಂತ ಯಶಸ್ವಿ ಅವಧಿಯಲ್ಲಿ ತಂಡವನ್ನು ಮುನ್ನಡೆಸುವಲ್ಲಿ ಇಬ್ಬರು ಅತ್ಯುತ್ತಮ ನಾಯಕತ್ವದ ದಾಖಲೆಯನ್ನು ಹೊಂದಿದ್ದಾರೆ. ಕ್ಲೈವ್ ಲಾಯ್ಡಿ ನಾಯಕತ್ವದಲ್ಲಿ ವಿಂಡೀಸ್ 36 ಪಂದ್ಯಗಳನ್ನು ಜಯಿಸಿತ್ತು. ಅವರು ನಾಯಕತ್ವ ವಹಿಸಿದ್ದ 74 ಟೆಸ್ಟ್ ಪಂದ್ಯಗಳಲ್ಲಿ 12 ರಲ್ಲಿ ಸೋತಿದೆ. ಅವರು ಅತ್ಯಂತ ಯಶಸ್ವಿ ನಾಯಕನಾಗಿ ಉಳಿದಿದ್ದಾರೆ.

 ವಿವಿಯನ್ ರಿಚರ್ಡ್ಸ್ ಅವರು ನಾಯಕತ್ವ ವಹಿಸಿದ್ದ 50 ಟೆಸ್ಟ್ ಪಂದ್ಯಗಳಲ್ಲಿ 27ರಲ್ಲಿ ಜಯಗಳಿಸಿತ್ತು. ರಿಚೀ ರಿಚರ್ಡ್ಸನ್ ಅವರು ನಾಯಕತ್ವ ವಹಿಸಿದ 24 ಟೆಸ್ಟ್ ಪಂದ್ಯಗಳಲ್ಲಿ 11 ವಿಂಡೀಸ್ ಗೆಲುವು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News