​ಚೀನಾದಲ್ಲಿ 22 ಹೊಸ ಕೊರೋನ ಪ್ರಕರಣಗಳು ಪತ್ತೆ

Update: 2020-07-18 17:47 GMT

ಬೀಜಿಂಗ್,ಜು.18: ಕೊರೋನ ವೈರಸ್ ಸೋಂಕಿನ ಉಗಮಸ್ಥಾನವಾದ ಚೀನಾದಲ್ಲಿ ಶುಕ್ರವಾರ ಸೋಂಕಿನ 22 ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 16 ಪ್ರಕರಣಗಳು ದೇಶೀಯವಾಗಿ ಹರಡಿರುವುದಾಗಿವೆ ಎಂದು ಸರಕಾರಿ ಸ್ವಾಮ್ಯದ ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.


 ದೇಶೀಯವಾಗಿ ಹರಡಿರುವ ಕೋವಿಡ್-19 ಸೋಂಕಿನ ಎಲ್ಲಾ ಪ್ರಕರಣಗಳು ಕ್ಸಿನ್ಜಾಂಗ್ ಪ್ರಾಂತದಿಂದಲೇ ವರದಿಯಾಗಿವೆ.
ವಿದೇಶದ ಆಗಮಿಸಿದವರಲ್ಲಿ ವರದಿಯಾದ 6 ಸೋಂಕು ಪ್ರಕರಣಗಳ ಪೈಕಿ ಮೂರು ಗುವಾಂಗ್ಡೊಂಗ್, ಎರಡು ಶಾಂಗ್ಡೊಂಗ್ ಹಾಗೂ ಒಂದು ಫುಜಿಯಾನ್ ಪ್ರಾಂತದಿಂದ ವರದಿಯಾಗಿವೆ. ಇದರೊಂದಿಗೆ ಚೀನಾದಲ್ಲಿ ವಿದೇಶಗಳಿಂದ ವಾಪಾಸಾದವರಲ್ಲಿ ಕಾಣಿಸಿಕಂಡಿರುವ ಕೊರೋನ ಪ್ರಕರಣಗಳ ಸಂಖ್ಯೆ 2004ಕ್ಕೇರಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ ಹೊರದೇಶದಿಂದ ವಾಪಸಾದವರಲ್ಲಿ ಕಾಣಿಸಿಕೊಂಡಿರುವ ಸೋಂಕು ಪ್ರಕರಣಗಳ ಪೈಕಿ 1920 ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದು, 84 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಗತ್ತಿನಾದ್ಯತ ಕಳೆದ 24 ತಾಸುಗಳಲ್ಲಿ ಕೊರೋನ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 1,42, 49,691ಕ್ಕೇರಿದ್ದು,ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ 6 ಲಕ್ಷವನ್ನು ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News