ಅಫ್ಘಾನ್: ಪಾಕ್ ಪಡೆಗಳಿಂದ ಮೋರ್ಟಾರ್ ದಾಳಿ

Update: 2020-07-20 16:28 GMT

ಕಾಬೂಲ್ (ಅಫ್ಘಾನಿಸ್ತಾನ), ಜು. 20: ಅಫ್ಘಾನಿಸ್ತಾನದ ಪೂರ್ವ ಕುನಾರ್ ಪ್ರಾಂತದ ಶೆಲ್ಟನ್ ಜಿಲ್ಲೆಯಲ್ಲಿ ಪಾಕಿಸ್ತಾನದ ಪಡೆಗಳು ಮೋರ್ಟಾರ್ ದಾಳಿ ನಡೆಸಿವೆ ಎಂದು ಟೋಲೊ ನ್ಯೂಸ್ ವರದಿ ಮಾಡಿದೆ.

‘‘ಪಾಕಿಸ್ತಾನಿ ಪಡೆಗಳು ಕಳೆದ 24 ಗಂಟೆಗಳ ಅವಧಿಯಲ್ಲಿ ಪೂರ್ವ ಕುನಾರ್ ಪ್ರಾಂತದ ಶೆಲ್ಟನ್ ಜಿಲ್ಲೆಯತ್ತ 29 ಬಾರಿ ಫಿರಂಗಿ ದಾಳಿ ನಡೆಸಿವೆ’’ ಎಂದು ಪ್ರಾಂತೀಯ ಗವರ್ನರ್‌ರ ವಕ್ತಾರರೊಬ್ಬರನ್ನು ಉಲ್ಲೇಖಿಸಿ ಟೋಲೊ ನ್ಯೂಸ್ ವರದಿ ಮಾಡಿದೆ.

ಆದರೆ, ಈವರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವಕ್ತಾರರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News