3ನೇ ಬಾರಿ ಕೊರೋನ ಸೋಂಕಿಗೆ ಒಳಗಾದ ಬ್ರೆಝಿಲ್ ಅಧ್ಯಕ್ಷ
Update: 2020-07-23 22:50 IST
ಬ್ರೆಸೀಲಿಯ (ಬ್ರೆಝಿಲ್), ಜು. 23: ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಮೂರನೇ ಬಾರಿಗೆ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಸಂಪರ್ಕ ಸಚಿವಾಲಯ ಬುಧವಾರ ತಿಳಿಸಿದೆ.
ಜುಲೈ 7ರಂದು ಅವರಲ್ಲಿ ಕೊರೋನ ವೈರಸ್ ಸೋಂಕು ಇರುವುದು ಮೊದಲ ಬಾರಿಗೆ ಪತ್ತೆಯಾಗಿತ್ತು.
‘‘ಅಧ್ಯಕ್ಷರನ್ನು ಮಂಗಳವಾರ ಇನ್ನೊಮ್ಮೆ ಕೊರೋನ ವೈರಸ್ ಪರೀಕ್ಷೆಗೆ ಗುರಿಪಡಿಸಲಾಯಿತು. ಆಗ ಅವರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ’’ ಎಂದು ಹೇಳಿಕೆ ತಿಳಿಸಿದೆ.
‘‘ಅಧ್ಯಕ್ಷರ ಆರೋಗ್ಯ ಸ್ಥಿತಿ ಈಗಲೂ ಉತ್ತಮವಾಗಿದೆ. ಅಧ್ಯಕ್ಷರ ವೈದ್ಯಕೀಯ ತಂಡ ಅವರನ್ನು ನೋಡಿಕೊಳ್ಳುತ್ತಿದೆ’’ ಎಂದು ಹೇಳಿಕೆ ತಿಳಿಸಿದೆ.