ವಿಶ್ವನಾಥನ್ ಆನಂದ್‌ಗೆ ಸತತ ನಾಲ್ಕನೇ ಸೋಲು
ಹೊಸದಿಲ್ಲಿ, ಜು.26: ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು 1,50,000 ಯುಎಸ್‌ಡಿ ಮೊತ್ತದ ಲೆಜೆಂಡ್ಸ್ ಆಫ್ ಚೆಸ್ ಆನ್‌ಲೈನ್ ಪಂದ್ಯಾವಳಿಯಲ್ಲಿ ಸತತ ನಾಲ್ಕನೇ ಸೋಲನ್ನು ಅನುಭವಿಸಿದರು.
ನೆದರ್‌ಲ್ಯಾಂಡ್‌ನ ಅನೀಶ್ ಗಿರಿ ವಿರುದ್ಧ 2-3 ಅಂತರದಿಂದ ವಿಶ್ವನಾಥನ್ ಆನಂದ್ ಸೋಲುಂಡರು.
ಶುಕ್ರವಾರ ತಡರಾತ್ರಿ ಡಚ್ ಆಟಗಾರ ಗಿರಿ ಗೆಲುವು ಸಾಧಿಸುವ ಮೊದಲು ಮಾಜಿ ವಿಶ್ವ ಚಾಂಪಿಯನ್ ಆನಂದ್‌ಮತ್ತು ಗಿರಿ ನಾಲ್ಕು ಪಂದ್ಯಗಳನ್ನು ಆಡಿದರು.
ಆದಾಗ್ಯೂ, ಆನಂದ್ ಈ ಟೂರ್ನಿಯಲ್ಲಿ ಮೊದಲ ಪಾಯಿಂಟ್‌ನ್ನು ಗಳಿಸಿದರು. ಈ ಹಿಂದೆ ಅವರು ಪೀಟರ್ ಸ್ವಿಡ್ಲರ್, ಮ್ಯಾಗ್ನಸ್ ಕಾರ್ಲ್ಸೆನ್ ಮತ್ತು ವ್ಲಾಡಿಮಿರ್ ಕ್ರಾಮ್ನಿಕ್ ವಿರುದ್ಧ ಸೋತಿದ್ದರು.
ಚೆನ್ನೈ ಮೂಲದ ಆನಂದ್ ಅವರು ಮ್ಯಾಗ್ನಸ್ ಕಾರ್ಲ್ಸೆನ್ ಚೆಸ್ ಟೂರ್ನಿಯಲ್ಲಿ ಚೊಚ್ಚಲ ಪ್ರದರ್ಶನ ನೀಡುತ್ತಿದ್ದು, ಅತ್ಯುತ್ತಮ-ನಾಲ್ಕು ಸ್ಪರ್ಧೆಯ ಆರಂಭಿಕ ಪಂದ್ಯದಲ್ಲಿ 82-ನಡೆಯೊಂದಿಗೆ ಡ್ರಾ ಸಾಧಿಸಿದರು.
ಎರಡನೇ ಪಂದ್ಯವು 49 ನಡೆಯದ್ದಾಗಿದ್ದರೆ, ಮೂರನೆಯ ಮತ್ತು ನಾಲ್ಕನೇ ಪಂದ್ಯಗಳನ್ನು ಡ್ರಾ ಮಾಡಲಾಗಿದ್ದು, ಆರ್ಮಗೆಡ್ಡೋನ್‌ಗೆ ವೇದಿಕೆ ಕಲ್ಪಿಸಿತು. ಗೆಲುವು ಮತ್ತು ಎರಡು ಅಂಕಗಳನ್ನು ಗಳಿಸಲು ಗಿರಿ ಕಪ್ಪು ಕಾಯಿಯಲ್ಲಿ ಆಡಿದರು.
ಆನಂದ್ ಹಂಗೇರಿಯ ಪೀಟರ್ ಲೆಕೊ ಅವರನ್ನು ಐದನೇ ಸುತ್ತಿನಲ್ಲಿ ಎದುರಿಸಲಿದ್ದಾರೆ. ಮ್ಯಾಗ್ನಸ್ ಕಾರ್ಲ್ಸೆನ್ ಅವರೊಂದಿಗೆ ಜಂಟಿ ಮುನ್ನಡೆ ಸಾಧಿಸಿದ್ದ ರಶ್ಯದ ಪೀಟರ್ ಸ್ವಿಡ್ಲರ್ ಅವರು ಚೀನಾದ ಡಿಂಗ್ ಲಿರೆನ್ ವಿರುದ್ಧ 1.5-2.5ರಿಂದ ಸೋತರು, ಕಾರ್ಲ್ಸೆನ್ 12 ಮ್ಯಾಚ್ ಪಾಯಿಂಟ್‌ಗಳನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ಇಯಾನ್ ನೆಪೋಮ್ನಿಯಾಚಿ (11) ಇದ್ದಾರೆ.
ಇದು ಪಂದ್ಯಾವಳಿಯಲ್ಲಿ ಲಿರೆನರ ಮೊದಲ ಗೆಲುವು. ಅನುಭವಿ ಇಸ್ರೇಲಿ ಬೋರಿಸ್ ಗೆಲ್ಫ್ಯಾಂಡ್ ಅವರನ್ನು 3-0 ಅಂತರದಿಂದ ಸೋಲಿಸಿದ ಕಾರ್ಲ್ಸೆನ್‌ಗೆ ಯಾವುದೇ ತೊಂದರೆಗಳಿಲ್ಲ.
ಪಂದ್ಯಾವಳಿ ಮ್ಯಾಗ್ನಸ್ ಕಾರ್ಲ್ಸೆನ್ ಚೆಸ್ ಪ್ರವಾಸದ ಭಾಗವಾಗಿದೆ. ಈ ಸ್ಪರ್ಧೆಯ ವಿಜೇತರು ಆಗಸ್ಟ್ 9 ರಿಂದ 20ರವರೆಗೆ ನಿಗದಿಯಾಗಿರುವ 3,00,000 ಯುಎಸ್‌ಡಿ ಬಹು ಮಾನ ಮೊತ್ತದ ಗ್ರ್ಯಾಂಡ್ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.
ಫಲಿತಾಂಶ: ನಾಲ್ಕನೇ ಸುತ್ತು: ಆನಂದ್ ಅವರನ್ನು ಗಿರಿ 3-2ರಿಂದ ಸೋಲಿಸಿದರು, ಮ್ಯಾಗ್ನಸ್ ಕಾರ್ಲ್ಸೆನ್ 3-0 ಅಂತರದಿಂದ ಬೋರಿಸ್ ಗೆಲ್ಫ್ಯಾಂಡ್ ವಿರುದ್ಧ ಜಯ ಗಳಿಸಿದರು, ವ್ಲಾಡ್ಮಿರ್ ಕ್ರಾಮ್ನಿಕ್ 2.5-1.5ರಿಂದ ಪೀಟರ್ ಲೆಕೊ ಅವರನ್ನು ಸೋಲಿಸಿದರು, ಡಿಂಗ್ ಲಿರೆನ್ 2.5-1.5ರಿಂದ ಪೀಟರ್ ಸ್ವಿಡ್ಲರ್ ಅವರನ್ನು ಸೋಲಿಸಿದರು, ಇಯಾನ್ ನೆಪೋಮಿನಿಯಾಚ್ಚಿ 2.5-1.5ರಿಂದ ವಾಸಿಲ್ ಇವಾಂಚುಕ್ ಅವರನ್ನು ಸೋಲಿಸಿದರು.