ಕೆಮರ್ ರೋಚ್‌ಗೆ 200ನೇ ವಿಕೆಟ್

Update: 2020-07-26 16:46 GMT

ಮ್ಯಾಂಚೆಸ್ಟರ್, ಜು.25: ವೆಸ್ಟ್ ಇಂಡಿಸ್‌ನ ವೇಗದ ಬೌಲರ್ ಕೆಮರ್ ರೋಚ್ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಗಳಿಸುವ ಮೂಲಕ 1994ರಲ್ಲಿ ಕರ್ಟ್ಲಿ ಆಂಬ್ರೋಸ್ ನಂತರ 200 ವಿಕೆಟ್ ಪಡೆದ ವಿಂಡೀಸ್‌ನ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನವಾಗಿರುವ ಶನಿವಾರ ವೆಸ್ಟ್ ಇಂಡೀಸ್‌ನ ರೋಚ್ ಈ ಸಾಧನೆ ಮಾಡಿದ್ದಾರೆ.

ರೋಚ್ 91ನೇ ಓವರ್‌ನ ಅಂತಿಮ ಎಸೆತದಲ್ಲಿ ಕ್ರಿಸ್ ವೋಕ್ಸ್ ಅವರನ್ನು ಪೆವಿಲಿಯನ್‌ಗೆಟ್ಟುವ ಮೂಲಕ 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಒಂಬತ್ತನೇ ವೆಸ್ಟ್ ಇಂಡೀಸ್ ಬೌಲರ್ ಎನಿಸಿಕೊಂಡರು.

ಎರಡು ಓವರ್‌ಗಳ ನಂತರ ರೋಚ್ ಮತ್ತೆ ಇಂಗ್ಲೆಂಡ್‌ಗೆ ಪ್ರಹಾರ ನೀಡಿ ಜೋಫ್ರಾ ಆರ್ಚರ್ ವಿಕೆಟ್ ಉಡಾಯಿಸಿದರು.ಅವರು ಇದರೊಂದಿಗೆ ಮೊದಲ ಇನಿಂಗ್ಸ್ ನಲ್ಲಿ 72 ರನ್ ನೀಡಿ ಇಂಗ್ಲೆಂಡ್‌ನ 4 ವಿಕೆಟ್ ಉಡಾಯಿಸಿದ್ದಾರೆ.

ವಿಂಡೀಸ್‌ನ 32ರ ಹರೆಯದ ಬಲಗೈ ವೇಗಿ 59ನೇ ಟೆಸ್ಟ್ ನಲ್ಲಿ 200ನೇ ವಿಕೆಟ್ ಸಾಧನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News