ಅಮೆರಿಕದ ಚೆಂಗ್ಡು ಕೌನ್ಸುಲೇಟ್ ಕಚೇರಿಯನ್ನು ವಶಕ್ಕೆ ತೆಗೆದುಕೊಂಡ ಚೀನಾ

Update: 2020-07-27 17:40 GMT

ಬೀಜಿಂಗ್, ಜು. 27: ನೈರುತ್ಯ ಚೀನಾದ ನಗರ ಚೆಂಗ್ಡು ಎಂಬಲ್ಲಿರುವ ಅಮೆರಿಕದ ಕೌನ್ಸುಲೇಟ್ ಕಚೇರಿಯನ್ನು ಸೋಮವಾರ ವಶಕ್ಕೆ ತೆಗೆದುಕೊಂಡಿರುವುದಾಗಿ ಚೀನಾ ತಿಳಿಸಿದೆ.

ಅಮೆರಿಕದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್‌ನಲ್ಲಿದ್ದ ಚೀನಾದ ಕೌನ್ಸುಲೇಟ್ ಕಚೇರಿಯನ್ನು ಮುಚ್ಚಲು ಅಮೆರಿಕ ತೆಗೆದುಕೊಂಡ ಕ್ರಮಗಳಿಗೆ ಪ್ರತೀಕಾರವಾಗಿ ಚೆಂಗ್ಡುನಲ್ಲಿರುವ ಅಮೆರಿಕದ ಕೌನ್ಸುಲೇಟ್ ಕಚೇರಿಯನ್ನು ಮುಚ್ಚಲು ಚೀನಾ ಕಳೆದ ವಾರ ಆದೇಶ ನೀಡಿತ್ತು.

ಚೆಂಗ್ಡು ಪೊಲೀಸರು ಸೋಮವಾರ ಬೆಳಗ್ಗೆ ಕೌನ್ಸುಲೇಟ್ ಕಚೇರಿಯ ಸುತ್ತಲಿನ ಪ್ರದೇಶದಲ್ಲಿನ ಚಲನವಲನಗಳ ಮೇಲೆ ನಿರ್ಬಂಧವನ್ನು ಹೇರಿದರು.

ಸೋಮವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಚೆಂಗ್ಡುನಲ್ಲಿರುವ ಅಮೆರಿಕ ಕೌನ್ಸುಲೇಟ್ ಕಚೇರಿಯನ್ನು ಮುಚ್ಚಲಾಗಿದೆ ಎಂದು ಚೀನಾ ವಿದೆಶ ವ್ಯವಹಾರಗಳ ಸಚಿವಾಲಯ ತಿಳಿಸಿತು. ಬಳಿಕ ಇನ್ನೊಂದು ಹೇಳಿಕೆ ನೀಡಿದ ಸಚಿವಾಲಯ, ಅಧಿಕಾರಿಗಳು ಕಚೇರಿ ಕಟ್ಟಡವನ್ನು ಪ್ರವೇಶಿಸಿ ಆವರಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News