ಲೆಜೆಂಡ್ಸ್ ಆಫ್ ಚೆಸ್ ಟೂರ್ನಿ: ವಿಶ್ವ ನಾಥನ್ ಆನಂದ್‌ಗೆ ಸತತ ಆರನೇ ಸೋಲು

Update: 2020-07-28 05:56 GMT

ಚೆನ್ನೈ: ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಲೆಜೆಂಡ್ಸ್ ಆಫ್ ಚೆಸ್ ಆನ್ಲೈನ್ ಪಂದ್ಯಾವಳಿಯಲ್ಲಿ ಸತತ ಆರನೇ ಸೋಲು ಅನುಭವಿಸಿದ್ದಾರೆ.

  ರಶ್ಯದ ಇಯಾನ್ ನೆಪೋಮ್ನಿಯಾಚ್ಟಿ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿದರು. ಆನಂದ್ ಆರನೇ ಸುತ್ತನ್ನು ಡ್ರಾ ಮೂಲಕ ಪ್ರಾರಂಭಿಸಿದರು. ಆನಂದ್ ಉತ್ತಮ ರಕ್ಷಣಾತ್ಮಕ ಆಟವನ್ನು ತೋರಿಸಿದರು ಮತ್ತು 53 ನಡೆಯ ನಂತರ ಇಬ್ಬರೂ ಆಟಗಾರರು ಡ್ರಾಕ್ಕೆ ಒಪ್ಪಿದರು.

ಆದಾಗ್ಯೂ ರಶ್ಯದ ಆಟಗಾರ ಎರಡನೇ ಗೇಮ್‌ನಲ್ಲಿ ಗೆಲುವಿ ನೊಂದಿಗೆ ಮುನ್ನಡೆ ಸಾಧಿಸಿದರು, ನಂತರ ಮೂರನೇ ಪಂದ್ಯವನ್ನು ಡ್ರಾ ಮಾಡಲಾಯಿತು. ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ನಾಲ್ಕನೇ ಗೇಮ್‌ನ್ನು ಗೆದ್ದು ಪಂದ್ಯವನ್ನು ಟೈಬ್ರೇಕರ್‌ಗೆ ಎಳೆದರು. ಟೈಬ್ರೇಕ್ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದ 50ರ ಹರೆಯದ ಭಾರತದ ಸೂಪರ್ ಸ್ಟಾರ್‌ಗೆ ನೇಪೋಮ್ನಿಯಾಚಿ ಚೇತರಿಸಿ ಕೊಳ್ಳಲು ಅವಕಾಶ ನೀಡಲಿಲ್ಲ.

ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ 17 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡರು. ನೆಪೋಮ್ಯಾನಿಯಚಿ 16 ಅಂಕಗಳೊಂದಿಗೆಎರಡನೇ ಸ್ಥಾನದಲ್ಲಿದ್ದರೆ, ಅವರ ದೇಶದವ್ಲಾಡಿಮಿರ್ ಕ್ರಾಮ್ನಿಕ್ 12 ಅಂಕಗಳೊಂದಿಗೆ ಮೂರನೇ ಸ್ಥಾನ ದಲ್ಲಿದ್ದಾರೆ. ಮ್ಯಾಗ್ನಸ್ ಕಾರ್ಲ್‌ಸನ್ ಚೆಸ್ ಪ್ರವಾಸದಲ್ಲಿ ಮೊದಲ ಬಾರಿಗೆ ಆಡುತ್ತಿರುವ ವಿಶ್ವನಾಥನ್ ಮೂರು ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಆನಂದ್ ಈ ಹಿಂದೆ ಪೀಟರ್ ಸ್ವಿಡ್ಲರ್, ಮ್ಯಾಗ್ನಸ್ ಕಾರ್ಲ್ ಸನ್, ವ್ಲಾಡಿಮಿರ್ ಕ್ರಾಮ್ನಿಕ್, ಅನೀಶ್ ಗಿರಿ ಮತ್ತು ಪೀಟರ್ ಲೇಕೊ ವಿರುದ್ಧ ಸೋಲು ಅನುಭವಿಸಿದ್ದರು.

ಫಲಿತಾಂಶಗಳು : 6ನೇ ಸುತ್ತು: ವಿಶ್ವನಾಥನ್ ಆನಂದ್ ಅವರಿಗೆ ಇಯಾನ್ ನೇಪೋಮ್ನಿಯಾಚ್ಚಿ ವಿರುದ್ಧ 2-3 ಸೋಲು, ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಡಿಂಗ್ ಲಿರೆನ್ ವಿರುದ್ಧ 2.5-1.5 ಅಂತರದಿಂದ ಜಯ, ಅನೀಶ್ ಗಿರಿ ಅವರಿಗೆ ಪೀಟರ್ ಲೆಕೊ ವಿರುದ್ಧ 2.5-1.5ಜಯ, ವ್ಲಾಡ್ಮಿರ್ ಕ್ರಾಮ್ನಿಕ್ ಅವರು ಬೋರಿಸ್ ಗೆಲ್ಫ್ಯಾಂಡ್ 3-2 ಅಮತರದಿಂದ ಮಣಿಸಿದರು, ಪೀಟರ್ ಸ್ವಿಡ್ಲರ್ ವಿರುದ್ಧ ವಾಸಿಲ್ ಇವಾಂಚುಕ್‌ಗೆ 3-2 ಜಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News