ಬ್ರೆಜಿಲ್ ಅಧ್ಯಕ್ಷರ ಪತ್ನಿ, ಐವರು ಸಚಿವರಿಗೆ ಕೊರೋನಾ

Update: 2020-07-31 06:32 GMT

ಬ್ರೆಸಲಿಯಾ, ಜು. ೩೧: ಬ್ರೆಜಿಲ್‌ನ ಅಧ್ಯಕ್ಷ ಜೈರ್ ಬೊಲ್ಸನಾರೊ ಅವರ ಪತ್ನಿ ಹಾಗೂ ಅಧ್ಯಕ್ಷರ ಸಂಪುಟದ ಐದನೇ ಸಚಿವರಿಗೆ ಕೊರೋನಾ ಸೊಂಕು ದೃಢಪಟ್ಟಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಮಾರ್ಕೋಸ್ ಪೊಂಟೆಸ್ ಅವರಿಗೆ ಸೋಂಕು ದೃಢಪಟ್ಟಿರುವುದನ್ನು ಅವರು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. ಫ್ಲೂ ರೀತಿಯ ರೋಗಲಕ್ಷಣ ಮತ್ತು ತಲೆನೋವು ಕಾಣಿಸಿಕೊಂಡ 57 ವರ್ಷ ವಯಸ್ಸಿನ ಅವರು ಇದೀಗ ಐಸೊಲೇಶನ್‌ನಲ್ಲಿದ್ದಾರೆ.
ಈ ಮಧ್ಯೆ 38 ವರ್ಷ ವಯಸ್ಸಿನ ಮಿಚೆಲ್ ಬೊಲ್ಸೊನಾರೊ ಅವರಿಗೂ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿರುವುದನ್ನು ಅಧ್ಯಕ್ಷರ ಕಚೇರಿಯ ಪ್ರಕಟಣೆ ದೃಢಪಡಿಸಿದೆ‌. ಉತ್ತಮ ಆರೋಗ್ಯದಿಂದ ಇದ್ದು ಎಲ್ಲ ಶಿಷ್ಟಾಚಾರಗಳನ್ನು ಅವರು ಪಾಲಿಸಲಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ಜುಲೈ 7ರಂದು ಬ್ರೆಜಿಲ್ ಅಧ್ಯಕ್ಷರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷೀಯ ಅರಮನೆಗೇ ಎರಡು ವಾರಗಳ ಕಾಲ ಅವರು ಸೀಮಿತರಾಗಿದ್ದರು. ಶನಿವಾರ ಅವರಿಗೆ ನೆಗೆಟಿವ್ ಫಲಿತಾಂಶ ಬಂದಿರುವುದನ್ನು ಪ್ರಕಟಿಸಲಾಗಿತ್ತು. ಆ ಬಳಿಕ ಮೊಟ್ಟಮೊದಲ ಬಾರಿಗೆ ಬುಧವಾರ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಈ ಮುನ್ನ ಕೃಷಿ ಸಚಿವ ತೆರೆಝಾ ಕ್ರಿಸ್ಟಿನಾ ಮತ್ತು ಮಹಿಳಾ, ಕುಟುಂಬ ಹಾಗೂ ಮಾನವಹಕ್ಕುಗಳ ಖಾತೆ ಸಚಿವ ದಮರೆಸ್ ಅಲ್ವೆಸ್ ಅವರಿಗೆ ಸೋಂಕು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News