×
Ad

ರಣಜಿ ಟ್ರೋಫಿ ಟೂರ್ನಿ ಡಿ.13ರಿಂದ ಆರಂಭ ?

Update: 2020-08-11 11:17 IST

ಹೊಸದಿಲ್ಲಿ, ಆ.10: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ರಣಜಿ ಟ್ರೋಫಿಯನ್ನು ಮಾತ್ರ ಆಯೋಜಿಸುವ ಮೂಲಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) ನವೆಂಬರ್ 19ರಿಂದ ಮಾರ್ಚ್ 10ರ ವರೆಗಿನ ದೇಶಿಯ ಋತುವಿಗೆ ಅಂಕುಶ ಹಾಕಲು ಚಿಂತನೆ ನಡೆಸುತ್ತಿದೆ.

50 ಓವರ್ ಟೂರ್ನಮೆಂಟ್‌ಗಳಾದ ವಿಜಯ ಹಝಾರೆ ಟ್ರೋಫಿ ಹಾಗೂ ಚಾಲೆಂಜರ್ ಸಿರೀಸ್‌ಗಳನ್ನು ಕೈಬಿಡಲಾಗಿದೆ. ರಣಜಿ ಟ್ರೋಫಿ ಟೂರ್ನಿಯು ಡಿಸೆಂಬರ್ 13ರಿಂದ ಆರಂಭವಾಗಲಿದ್ದು, ಲೀಗ್ ಹಂತ ಐದು ಗ್ರೂಪ್ ಮೂಲಕ ನಡೆಸುವ ಕುರಿತು ಪ್ರಸ್ತಾವಿಸಲಾಗಿದೆ. ತಲಾ 8 ತಂಡಗಳ ನಾಲ್ಕು ಗುಂಪುಗಳು ಹಾಗೂ ಈಶಾನ್ಯದಿಂದ ಆರು ಹೊಸ ತಂಡಗಳಿರುವ ಪ್ಲೇಟ್ ಗ್ರೂಪ್ ಇರುತ್ತವೆ. ಮೊದಲ ಮೂರು ಗುಂಪುಗಳಲ್ಲಿ ಅಗ್ರ ಎರಡು ತಂಡಗಳು ನಾಕೌಟ್‌ಗೆ ಅರ್ಹತೆ ಪಡೆದರೆ, ಉಳಿದಿರುವ ಎರಡು ನಾಕೌಟ್ ಅರ್ಹತಾ ಪಂದ್ಯಗಳು ಸಂಕೀರ್ಣ ಅರ್ಹತಾ ಸೂತ್ರದ ಮೂಲಕ ನಿರ್ಧರಿಸಲಾಗುತ್ತದೆ.

ಪ್ರಸ್ತಾವಿತ ಋತುವಿನಲ್ಲಿ 50 ಓವರ್‌ಗಳ ಟೂರ್ನಿಗಳಲ್ಲದೆ, ಇರಾನಿ ಕಪ್ ಅಥವಾ ದುಲೀಪ್ ಟ್ರೋಫಿ ಒಳಗೊಂಡಿಲ್ಲ. ರಾಷ್ಟ್ರೀಯ ಆಯ್ಕೆಗಾರರಿಂದ ಆಯ್ಕೆಯಾಗುವ 3 ತಂಡಗಳ ಟೂರ್ನಿಯಾಗಿ ಬದಲಾದ ಬಳಿಕ ದುಲೀಪ್ ಟ್ರೋಫಿ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಬಿಸಿಸಿಐ ಈ ಬಾರಿ ಇರಾನಿ ಕಪ್ ಆಯೋಜಿಸದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಕಳೆದ ಋತುವಿನಲ್ಲಿ (ಮಾರ್ಚ್ 18ರಿಂದ 22)ಇರಾನಿ ಕಪ್ ಮಾತ್ರ ಕೋವಿಡ್-19ನಿಂದಾಗಿ ರದ್ದಾಗಿದ್ದ ಮೊದಲ ಪ್ರಥಮ ದರ್ಜೆ ಪಂದ್ಯವಾಗಿತ್ತು. ಮುಷ್ತಾಕ್ ಅಲಿ ಹಾಗೂ ರಣಜಿ ಟ್ರೋಫಿಗಳ ಮಧ್ಯೆ ಇರಾನಿ ಕಪ್‌ಗಾಗಿ ರಣಜಿ ಟ್ರೋಫಿ ಚಾಂಪಿಯನ್ ಸೌರಾಷ್ಟ್ರ ತಂಡ ಶೇಷ ಭಾರತವನ್ನು ಎದುರಿಸಲಿದೆಯೇ ಎಂದು ಕಾದುನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News