ಐಪಿಎಲ್ ಬಳಿಕ ಲಂಕಾ ಪ್ರೀಮಿಯರ್ ಲೀಗ್

Update: 2020-08-12 09:01 GMT

ಕೊಲಂಬೊ: ಆಗಸ್ಟ್ 28ರಂದು ಶ್ರೀಲಂಕಾದಲ್ಲಿ ಪ್ರಾರಂಭವಾಗಬೇಕಿದ್ದ ಲಂಕಾ ಪ್ರೀಮಿಯರ್ ಲೀಗ್‌ನ್ನು ಕೋವಿಡ್-19 ಕಾರಣದಿಂದಾಗಿ ಕ್ವಾರಂಟೈನ್ ನಿಯಮದನ್ವಯ ವಿದೇಶೀ ಆಟಗಾರರನ್ನು ಕರೆತರುವುದು ಕಷ್ಟಕರವಾದ ಕಾರಣ ಮುಂದೂಡಲಾಗಿದೆ.

 ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಶ್ರೀಲಂಕಾ ಲೀಗ್ ಪಂದ್ಯಾವಳಿ ನವೆಂಬರ್ ಮಧ್ಯದಲ್ಲಿ ನಡೆಯುವ ಸಾಧ್ಯತೆಯಿದೆ.

  ‘‘ನಾವು ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ ಮತ್ತು ದೇಶಕ್ಕೆ ಪ್ರವೇಶಿಸುವ ಯಾರಿಗಾದರೂ 14ದಿನಗಳ ಕ್ವಾರಂಟೈನ್ ಅವಧಿ ಕಡ್ಡಾಯವಾಗಿದೆ. ಆದ್ದರಿಂದ ಆಗಸ್ಟ್ ಕೊನೆಯಲ್ಲಿ ಪಂದ್ಯಾವಳಿಯನ್ನು ಆಡುವುದು ಕಷ್ಟ. ನಾವು ಐಪಿಎಲ್ ನಂತರ ನವೆಂಬರ್ ಮಧ್ಯದಲ್ಲಿ ಪಂದ್ಯಾವಳಿಯನ್ನು ನಡೆಸುತ್ತೇವೆ’’ಎಂದು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಅಧ್ಯಕ್ಷ ಶಮ್ಮಿ ಸಿಲ್ವಾ ತಿಳಿಸಿದರು. ‘‘ಈ ಪಂದ್ಯಾವಳಿ ಕೊಲಂಬೊ, ಕ್ಯಾಂಡಿ, ಗಾಲೆ, ಡಂಬುಲಾ ಮತ್ತು ಜಾಫ್ನಾವನ್ನು ಪ್ರತಿನಿಧಿಸುವ ಐದು ಫ್ರಾಂಚೈಸಿ ತಂಡಗಳ ನಡುವಿನ ಸ್ಪರ್ಧೆಯಾಗಿರಬೇಕಿತ್ತು. ಪಂದ್ಯಾವಳಿ ಆಗಸ್ಟ್ 28ರಿಂದ ಪ್ರಾರಂಭಗೊಂಡು ಸೆಪ್ಟಂಬರ್ 20ರಂದು ಮುಕ್ತಾಯಗೊಳ್ಳಬೇಕಿತ್ತು. ಶ್ರೀಲಂಕಾ ಕ್ರಿಕೆಟ್ ಪ್ರಕಾರ 70 ವಿದೇಶಿ ಆಟಗಾರರು ಎಲ್‌ಪಿಎಲ್‌ನಲ್ಲಿ ಆಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

  ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿರುವ ಐಪಿಎಲ್ 2020ರಲ್ಲಿ ಪ್ರಮುಖ ಟ್ವೆಂಟಿ-20 ಆಟಗಾರರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News