ಕೋವಿಡ್-19 ಪರೀಕ್ಷೆಗೆ ಒಳಗಾದ ಧೋನಿ

Update: 2020-08-13 09:22 GMT

ಹೊಸದಿಲ್ಲಿ, ಆ.13: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ‌ಧೋನಿ ಬುಧವಾರದಂದು ಸಹ ಆಟಗಾರ ಮೋನು ಸಿಂಗ್‌ ಜೊತೆಗೆ ರಾಂಚಿಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾದರು ಎಂದು ವರದಿಯಾಗಿದೆ.

ಫಲಿತಾಂಶ ಗುರುವಾರ ಬರುವ ನಿರೀಕ್ಷೆಯಿದೆ. ಒಂದು ವೇಳೆ ಫಲಿತಾಂಶ ನೆಗೆಟಿವ್ ಬಂದರೆ ಧೋನಿ ಚೆನ್ನೈ ತೆರಳಿ ತರಬೇತಿ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ಚೆನ್ನೈ ತಂಡ 2020ರ ಐಪಿಎಲ್ ಆಡಲು ಯುಎಇಗೆ ತೆರಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News