ಸ್ಟಂಪಿಂಗ್ ಹಾಗೂ ರನೌಟ್ ವಿಚಾರದಲ್ಲಿ ಧೋನಿ ಪಿಕ್‌ಪಾಕೆಟ್‌ಗಳಿಗಿಂತ ವೇಗ: ರವಿ ಶಾಸ್ತ್ರಿ

Update: 2020-08-16 08:54 GMT

ಹೊಸದಿಲ್ಲಿ, ಆ.16: ಎಂಎಸ್ ಧೋನಿ ಓರ್ವ ವಿಕೆಟ್‌ಕೀಪರ್ ಹಾಗೂ ಕ್ರಿಕೆಟರ್ ಆಗಿ ಪಿಕ್ ಪಾಕೆಟ್‌ಗಳಿಗಿಂತಲೂ ವೇಗವಾಗಿ ವರ್ತಿಸುತ್ತಿದ್ದರು. ಅವರು ಎಲ್ಲ ಸಮಯದಲ್ಲೂ ಪಂದ್ಯದ ದಿಕ್ಕು ಬದಲಿಸುತ್ತಿದ್ದರು ಎಂದು ಶನಿವಾರ ದಿಢೀರನೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಎಂಎಸ್ ಧೋನಿಯ ಚುರುಕುತನದ ಫೀಲ್ಡಿಂಗ್‌ನ್ನು ಉಲ್ಲೇಖಿಸಿದ ಭಾರತದ ಮುಖ್ಯಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಧೋನಿ ಯಾರಿಂದಲೂ ಹಿಂದೆ ಬೀಳುವುದಿಲ್ಲ. ಅವರು ಎಲ್ಲ ಸಮಯದಲ್ಲೂ ಕ್ರಿಕೆಟ್‌ನ್ನು ಬದಲಾಯಿಸಿದರು. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಅದನ್ನು ಅವರು ಮಾಡಿ ತೋರಿಸಿದ್ದು, ಇದು ಅವರ ಸೊಗಸಾದ ಆಟಕ್ಕೆ ಸಾಕ್ಷಿ ಎಂದು 'ಇಂಡಿಯಾ ಟುಡೆ'ಗೆ ಶಾಸ್ತ್ರಿ ಹೇಳಿದರು.

"ಸ್ಟಂಪಿಂಗ್ ಹಾಗೂ ರನೌಟ್ ವಿಚಾರದಲ್ಲಿ ಅವರು ನನಗೆ ತುಂಬಾ ಇಷ್ಟವಾಗುತ್ತಾರೆ. ಸ್ಟಂಪಿಂಗ್ ಹಾಗೂ ರನೌಟ್ ವೇಳೆ ಅವರ ಕೈಗಳು ಯಾವುದೇ ಪಿಕ್‌ಪ್ಯಾಕೆಟರ್‌ಗಳಿಗಿಂತ ವೇಗವಾಗಿ ಕೆಲಸ ಮಾಡುತ್ತದೆ'' ಎಂದು ಶಾಸ್ತ್ರಿ ಹೇಳಿದರು.

"ಟಿ-20ಯಲ್ಲಿ ಧೋನಿ ವಿಶ್ವಕಪ್ ಜಯಿಸಿದ್ದಾರೆ. ಹಲವು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದು, 50 ಓವರ್ ಮಾದರಿ ಕ್ರಿಕೆಟ್‌ನಲ್ಲೂ ವಿಶ್ವಕಪ್ ಗೆದ್ದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ನಂ.1 ಸ್ಥಾನಕ್ಕೆ ತಲುಪಿಸಿದ್ದರು. ಅವರು 90 ಟೆಸ್ಟ್ ಪಂದ್ಯಗಳನ್ನು ಆಡಿದ್ದರು'' ಎಂದು ಧೋನಿಯ ಸಾಧನೆಯನ್ನು ಶಾಸ್ತ್ರಿ ಮೆಲುಕು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News