×
Ad

ಓಟದ ರಾಜ ಉಸೇನ್‌ ಬೋಲ್ಟ್‌ಗೆ ಕೊರೋನ ಸೋಂಕು

Update: 2020-08-25 15:16 IST

ಜಮೈಕಾ, ಆ.25: ಕೊರೋನ ವೈರಸ್ ಪರೀಕ್ಷೆಯಲ್ಲಿ ಉಸೇನ್ ಬೋಲ್ಟ್ ಪಾಸಿಟಿವ್ ವರದಿ ಬಂದಿದ್ದು, ಸೋಮವಾರದಿಂದ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಜಮೈಕಾದ ಮಾಧ್ಯಮಗಳು ವರದಿಮಾಡಿವೆ.

ಓಟದ ರಾಜ ಖ್ಯಾತಿಯ ಬೋಲ್ಟ್ 34ನೇ ಹುಟ್ಟು ಹಬ್ಬ ಆಚರಿಸಿದ ಮರುದಿನವೇ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.

ನಿವೃತ್ತ ಓಟಗಾರ ಬೋಲ್ಟ್ 100 ಮೀ. ಹಾಗೂ 200 ಮೀ. ಓಟದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ತನ್ನ ಕೋವಿಡ್ ಪರೀಕ್ಷೆಯ ಕುರಿತು ದೃಢಪಡಿಸದ ಬೋಲ್ಟ್ ತನ್ನೊಂದಿಗೆ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News