×
Ad

ಭರ್ಜರಿ ಸಿಕ್ಸರ್ ಮೂಲಕ ತನ್ನ ಕಾರಿನ ಕಿಟಕಿ ಗಾಜು ಪುಡಿಗಟ್ಟಿದ ಕೆವಿನ್ ಓಬ್ರಿಯಾನ್!

Update: 2020-08-28 14:21 IST

 ಲಂಡನ್, ಆ.28: ಐರ್‌ಲ್ಯಾಂಡ್ ಬಿಗ್ ಹಿಟ್ಟಿಂಗ್ ಬ್ಯಾಟ್ಸ್‌ಮನ್ ಕೆವಿನ್ ಓಬ್ರಿಯಾನ್ ಭರ್ಜರಿ ಸಿಕ್ಸರ ಸಿಡಿಸಿ ತನ್ನದೇ ಕಾರಿನ ಕಿಟಕಿಯ ಗಾಜನ್ನು ಪುಡಿಗಟ್ಟಿದ್ದಾರೆ.

  ತನ್ನ ಅಬ್ಬರದ ಬ್ಯಾಟಿಂಗ್‌ನ ಮೂಲಕ ಐರ್‌ಲ್ಯಾಂಡ್‌ಗೆ ಹಲವು ಬಾರಿ ಪಂದ್ಯವನ್ನು ಗೆದ್ದುಕೊಟ್ಟಿರುವ ಕೆವಿನ್ ಡಬ್ಲಿನ್‌ನಲ್ಲಿ ಗುರುವಾರ ನಡೆದ ದೇಶಿಯ ಟ್ವೆಂಟಿ-20 ಕ್ರಿಕೆಟ್ ಪಂದ್ಯದ ವೇಳೆ ಲೆನ್‌ಸ್ಟರ್ ಲೈಟಿಂಗ್ ಪರ ನಾರ್ತ್‌ವೆಸ್ಟ್ ವಾರಿಯರ್ಸ್ ತಂಡದ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಿದರು.

ಕೆವಿನ್ ಕೇವಲ 37 ಎಸೆತಗಳಲ್ಲಿ 8 ಸಿಕ್ಸರ್‌ಗಳ ಸಹಿತ 82 ರನ್ ಗಳಿಸಿದ್ದಾರೆ. ಕೆವಿನ್ ಸಿಡಿಸಿದ್ದ ಸಿಕ್ಸರ್‌ವೊಂದು ಪೆಂಬ್ರೋಕ್ ಕ್ರಿಕೆಟ್ ಕ್ಲಬ್‌ನ ಕಾರು ಪಾರ್ಕ್‌ನಲ್ಲಿ ನಿಲ್ಲಿಸಿದ್ದ ಕೆವಿನ್ ಕಾರಿನ ಕಿಟಕಿಗೆ ಅಪ್ಪಳಿಸಿದ ಪರಿಣಾಮ ಗಾಜು ಪುಡಿಪುಡಿಯಾಗಿದೆ.

ಕ್ರಿಕೆಟ್ ಐರ್‌ಲ್ಯಾಂಡ್ ತನ್ನ ಟ್ವಿಟರ್‌ನಲ್ಲಿ ಕ್ರಿಕೆಟ್ ಚೆಂಡು ಬಿದ್ದು ಹಾನಿಯಾಗಿರುವ ಕಾರಿನ ಚಿತ್ರವನ್ನು ಪೋಸ್ಟ್ ಮಾಡಿದೆ. ಮಳೆಯಿಂದಾಗಿ 12 ಓವರ್‌ಗೆ ಕಡಿತಗೊಂಡ ಪಂದ್ಯವನ್ನು ಕೆವಿನ್ ಪ್ರತಿನಿಧಿಸಿರುವ ತಂಡ ಗೆದ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News