ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್, 12 ಸಹಾಯಕ ಸಿಬ್ಬಂದಿಗೆ ಕೋವಿಡ್ ದೃಢ
ದುಬೈ: ಐಪಿಲ್ 2020 ಪಂದ್ಯಾವಳಿ ಆರಂಭಗೊಳ್ಳಲು ಇನ್ನೇನು ಕೆಲವೇ ವಾರಗಳಿವೆ ಎನ್ನುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿಯೊಬ್ಬರಿಗೆ ಹಾಗೂ ತಂಡದ 12 ಮಂದಿ ಸಹಾಯಕ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಇತರ 12 ಮಂದಿಯಲ್ಲಿ ತಂಡದ ಸೋಶಿಯಲ್ ಮೀಡಿಯಾ ಘಟಕದ ಸಿಬ್ಬಂದಿಯೂ ಸೇರಿದ್ದಾರೆ.
ಕೋವಿಡ್ ದೃಢಪಟ್ಟಿರುವ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ. ಬೌಲರ್‍ಗೆ ದುಬೈಯಲ್ಲಿನ ಕಡ್ಡಾಯ ಪರೀಕ್ಷಾ ಅವಧಿಯ ಮೊದಲ ಹಾಗೂ ಮೂರನೇ ದಿನ ಸೋಂಕು ದೃಢಪಟ್ಟಿವೆ. ಸೋಂಕಿತರೆಲ್ಲರನ್ನೂ ಎರಡು ವಾರ ಐಸೊಲೇಶನ್‍ನಲ್ಲಿರಿಸಲಾಗುವುದು ಹಾಗೂ ನಂತರ 24 ಗಂಟೆ ಅವಧಿಯಲ್ಲಿ ಅವರ ಎರಡು ಪಿಸಿಆರ್ ಪರೀಕ್ಷೆಗಳು ನೆಗೆಟಿವ್ ಬಂದರೆ ಮಾತ್ರ ಅವರು `ಬಯೋ ಸೆಕ್ಯೂರ್ ವಾತಾವರಣದದಲ್ಲಿ' ಇತರ ಚಟುವಟಿಕೆಗಳಿಗೆ ಅನುಮತಿ ಪಡೆಯುತ್ತಾರೆ.
ಸದ್ಯ ಇಡೀ ಚೆನ್ನೈ ಸೂಪರ್ ಕಿಂಗ್ಸ್ ತಂಡ ದುಬೈಯಲ್ಲಿನ ಹೋಟೆಲ್‍ನಲ್ಲಿ ಕ್ವಾರಂಟೈನ್‍ಗೊಳಗಾಗಿದೆ. ತಂಡದ ಬೌಲರ್ ಮತ್ತಿತರ ಸಿಬ್ಬಂದಿಗೆ ಚೆನ್ನೈಯಲ್ಲಿಯೇ ಸೋಂಕು ತಗಲಿರಬಹುದು ಎಂದು ಹೇಳಲಾಗುತ್ತಿದೆ.