ಗೆಲುವಿನ ಓಟ ಮುಂದುವರಿಸಿದ ಜೊಕೊವಿಕ್

Update: 2020-09-04 05:03 GMT

ನ್ಯೂಯಾರ್ಕ್,ಸೆ.3: ವಿಶ್ವದ ನಂಬರ್ ಒನ್ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಅವರು ಬ್ರಿಟನ್‌ನ ಕೈಲ್ ಎಡ್ಮಂಡ್ ಅವರನ್ನು 6-7 (5), 6-3, 6-4, 6-2 ಸೆಟ್‌ಗಳಿಂದ ಸೋಲಿಸುವ ಮೂಲಕ 2020 ರಲ್ಲಿ ಅಜೇಯರಾಗಿ ಯುಎಸ್ ಓಪನ್‌ನ ಮೂರನೇ ಸುತ್ತಿಗೆ ಕಾಲಿಟ್ಟರು.

 18ನೇ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಕನಸು ಹೊತ್ತಿರುವ ಜೊಕೊವಿಕ್ 2020ರ ಪಂದ್ಯದ ದಾಖಲೆಯನ್ನು 25-0ಕ್ಕೆ ಸುಧಾರಿಸಿದರು. 2011ರಲ್ಲಿ 41-0 ಗೆಲುವಿನ ದಾಖಲೆಯನ್ನು ಹೊಂದಿದ್ದ ಜೊಕೊವಿಕ್ ಅವರ ಎರಡನೇ ಅತ್ಯುತ್ತಮ ಆರಂಭವಾಗಿದೆ.

      ಟೆನಿಸ್‌ನ ಬಿಗ್ ತ್ರಿಗಳಲ್ಲಿ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಪಂದ್ಯಾವಳಿಯಿಂದ ದೂರ ಉಳಿದಿದ್ದರಿಂದ ಜೊಕೊವಿಕ್ ಟ್ರೋಫಿಯನ್ನು ಗೆಲ್ಲುವ ಫೇವರಿಟ್ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಈ ಪಂದ್ಯದಲ್ಲಿ ನಿಧಾನಗತಿಯ ಆಟ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News