ಪ್ಲಿಸ್ಕೋವಾಗೆ ಸೋಲು

Update: 2020-09-04 05:04 GMT

   ನ್ಯೂಯಾರ್ಕ್, ಸೆ.3: ಯುಎಸ್ ಓಪನ್‌ನ ಎರಡನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತ ಕರೊಲಿನಾ ಪ್ಲಿಸ್ಕೋವಾ ಅವರು ಫ್ರೆಂಚ್ ಆಟಗಾರ್ತಿ ಕ್ಯಾರೊಲಿನ್ ಗಾರ್ಸಿಯಾ ವಿರುದ್ಧ 6-1, 7-6 (2) ಅಂತರದಲ್ಲಿ ಸೋತರು.

 ಮಾಜಿ ವಿಶ್ವ ನಂಬರ್ ಒನ್ ಆಗಿದ್ದ ಪ್ಲಿಸ್ಕೋವಾ ಅವರು ಗಾರ್ಸಿಯಾರ ಶಕ್ತಿ ಮತ್ತು ನಿಖರತೆಯ ಮುಂದೆ ಕೈ ಸುಟ್ಟುಕೊಂಡರು. ಏಕೆಂದರೆ ಫ್ರೆಂಚ್ ಆಟಗಾರ್ತಿ ಆರಂಭಿಕ ಸೆಟ್‌ನಲ್ಲೇ ಪ್ಲಿಸ್ಕೋವಾಗೆ ಆಘಾತ ನೀಡಿದರು.

    2018ರಲ್ಲಿ ಸಿಮೊನಾ ಹಾಲೆಪ್ ಆರಂಭಿಕ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಆ ಬಳಿಕ ಇದೇ ಮೊದಲ ಬಾರಿ ಮಹಿಳೆಯರ ಅಗ್ರ ಶ್ರೇಯಾಂಕಿತ ಆಟಗಾರ್ತಿಯೊಬ್ಬರು ಕೆಟ್ಟ ಪ್ರದರ್ಶನ ನೀಡಿ ಹೊರ ನಡೆದಿದ್ದಾರೆ.

    ಕಳೆದ ವಾರ ನಡೆದ ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್ ಅಭ್ಯಾಸದ ಆರಂಭಿಕ ಸುತ್ತಿನಲ್ಲಿ ಹೊರ ನಡೆದಿದ್ದ ಪ್ಲಿಸ್ಕೋವಾ ಬುಧವಾರ ಎರಡನೇ ಸೆಟ್‌ನಲ್ಲಿ ಟೈಬ್ರೇಕ್ ಕಡೆಗೆ ಒಯ್ದರು. ಆದರೆ ಅಂತಿಮ ಫಲಿತಾಂಶ ಎದುರಾಳಿಯ ಕಡೆಗೆ ತಿರುಗಿತು.

  ‘‘ನಾನು ನನ್ನ ಆಟದ ಯೋಜನೆಗೆ ಅಂಟಿಕೊಂಡಿದ್ದೇನೆ ಮತ್ತು ಪ್ರತಿಯೊಂದು ಹಂತವೂ ನನಗೆ ಬಹಳ ಮುಖ್ಯವಾಗಿತ್ತು. ಅಗ್ರ ಆಟಗಾರ್ತಿಯ ವಿರುದ್ಧ ಉತ್ತಮ ಗೆಲುವಿನಿಂದ ನನ್ನಲ್ಲಿ ಈಗ ಆತ್ಮವಿಶ್ವಾಸ ಹೆಚ್ಚಾಗಿದೆ’’ ಎಂದು ಗಾರ್ಸಿಯಾ ಅಭಿಪ್ರಾಯಪಟ್ಟಿದ್ದಾರೆ.

 2014ರಲ್ಲಿ ಸೆರೆನಾ ವಿಲಿಯಮ್ಸ್ ಗೆಲುವಿನ ನಂತರ ಅಗ್ರ ಶ್ರೇಯಾಂಕ ಆಟಗಾರ್ತಿಯರು ಪ್ರಶಸ್ತಿ ಗೆದ್ದಿಲ್ಲ. ಗಾರ್ಸಿಯಾ ಅಪೂರ್ವ ಪ್ರದರ್ಶನದೊಂದಿಗೆ ತನ್ನ ಫಾರ್ಮ್‌ನ್ನು ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News