ಬ್ರೆಝಿಲ್‌ನ ಪುರುಷ -ಮಹಿಳಾ ಫುಟ್ಬಾಲ್ ತಂಡಗಳಿಗೆ ಸಮಾನ ವೇತನ

Update: 2020-09-04 05:08 GMT

ಬ್ರೆಸಲಿಯಾ, ಸೆ.3: ಬ್ರೆಝಿಲ್ ಫುಟ್ಬಾಲ್ ಕಾನ್ಫೆಡರೇಷನ್ (ಸಿಬಿಎಫ್) ತನ್ನ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಸಾಕರ್ ತಂಡಗಳಿಗೆ ಸಮಾನ ವೇತನ ಮತ್ತು ಬಹುಮಾನದ ಹಣವನ್ನು ನೀಡಲಿದೆ ಎಂದು ಬುಧವಾರ ಹೇಳಿದೆ.

ಸಿಬಿಎಫ್ ಪುರುಷರು ಮತ್ತು ಮಹಿಳೆಯರನ್ನು ಸಮಾನವಾಗಿ ಪರಿಗಣಿಸುತ್ತಿದೆ ಎಂದು ಸಿಬಿಎಫ್ ಮುಖ್ಯಸ್ಥ ರೊಜೆರಿಯೊ ಕ್ಯಾಬೊಕ್ಲೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  ಇಬ್ಬರು ಮಹಿಳಾ ಸಾಕರ್ ಸಂಯೋಜಕರಾದ ದುಡಾ ಲುಯಿಜೆಲ್ಲಿ ಮತ್ತು ಅಲೈನ್ ಪೆಲ್ಲೆಗ್ರಿನೊ ಅವರನ್ನು ಸಹ ನೇಮಕ ಮಾಡಲಾಗಿದೆ ಎಂದು ಸಿಬಿಎಫ್ ಹೇಳಿದೆ.

 ಲಿಂಗ ತಾರತಮ್ಯ ಆರೋಪಿಸಿ ಅಮೆರಿಕದ ಮಹಿಳಾ ತಂಡವು ಕಳೆದ ವರ್ಷ ಯು.ಎಸ್. ಸಾಕರ್ ಆಡಳಿತ ಮಂಡಳಿಗೆ ಮೊಕದ್ದಮೆ ಹೂಡಿದಾಗಿನಿಂದ ಪುರುಷರ ಮತ್ತು ಮಹಿಳೆಯರ ವೃತ್ತಿಪರ ಸಾಕರ್ ಆಟಗಾರರ ನಡುವಿನ ವೇತನ ಅಸಮಾನತೆಯು ಗಮನ ಸೆಳೆದಿತ್ತು. ತಂಡದ ಹಕ್ಕುಗಳನ್ನು ನ್ಯಾಯಾಲಯವು ಮೇ ತಿಂಗಳಲ್ಲಿ ವಜಾಗೊಳಿಸಿತು ಮತ್ತು ತಕ್ಷಣವೇ ಮೇಲ್ಮನವಿ ಸಲ್ಲಿಸುವ ಪ್ರಯತ್ನವನ್ನು ನಿರಾಕರಿಸಲಾಯಿತು. ಪುರುಷರ ಮತ್ತು ಮಹಿಳೆಯರ ತಂಡಗಳ ನಡುವಿನ ವೇತನದ ಅಂತರವನ್ನು ಕಡಿಮೆ ಮಾಡುವ ಹೊಸ ಸಾಮೂಹಿಕ ಚೌಕಾಶಿ ಒಪ್ಪಂದದ ಕುರಿತು ಆಟಗಾರರ ಸಂಘದೊಂದಿಗೆ ಒಪ್ಪಂದಕ್ಕೆ ಬಂದಿರುವುದಾಗಿ ಆಸ್ಟ್ರೇಲಿಯದ ಫುಟ್ಬಾಲ್ ಆಡಳಿತ ಮಂಡಳಿ ನವೆಂಬರ್‌ನಲ್ಲಿ ಹೇಳಿತ್ತು.

 ನ್ಯೂಝಿಲ್ಯಾಂಡ್ ಮತ್ತು ನಾರ್ವೆ ಕೂಡ ತಮ್ಮ ಪುರುಷ ಮತ್ತು ಮಹಿಳಾ ಆಟಗಾರರ ನಡುವಿನ ವೇತನದ ಅಂತರವನ್ನು ಪರಿಹರಿಸಲು ಮುಂದಾಗಿವೆ.

  ಬ್ರೆಝಿಲ್ ಮಹಿಳಾ ತಂಡವು 2007ರಲ್ಲಿ ವಿಶ್ವಕಪ್ ಫೈನಲ್, 2004 ಮತ್ತು 2008 ರಲ್ಲಿ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News