ಬಾರ್ಸಿಲೋನ ತೊರೆಯುವ ನಿರ್ಧಾರದಿಂದ ಹಿಂದೆ ಸರಿದ ಲಿಯೊನೆಲ್ ಮೆಸ್ಸಿ

Update: 2020-09-04 18:34 GMT

ಮ್ಯಾಡ್ರಿಡ್, ಸೆ.4: ನಾನು ಮುಂದಿನ ಋತುವಿನಲ್ಲೂ ಬಾರ್ಸಿಲೋನ ಫುಟ್ಬಾಲ್ ಕ್ಲಬ್‌ನಲ್ಲಿ ಉಳಿದುಕೊಳ್ಳುವೆ ಎಂದು ಹೇಳಿರುವ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ, ಬಾರ್ಸಿಲೋನ ತೊರೆಯುವ ತನ್ನ ನಿರ್ಧಾರದಿಂದ ಯೂ-ಟರ್ನ್ ಪಡೆದಿದ್ದಾರೆ.

‘‘ಬಾರ್ಸಿಲೋನದಿಂದ ಬಲವಂತವಾಗಿ ನಿರ್ಗಮಿಸಲು ನಾನು ಇಂತಹ ವಿಚಾರವನ್ನು ಪರಿಗಣಿಸಿರಲಿಲ್ಲ. ನಾನು ಈ ಕ್ಲಬ್‌ನಲ್ಲಿ ವೃತ್ತಿಜೀವನದ ಸಂಪೂರ್ಣ ಸಮಯ ಕಳೆದಿದ್ದೇನೆ. ನಾನು ಕ್ಲಬ್‌ನ್ನು ತ್ಯಜಿಸಲು ಸ್ವತಂತ್ರನಿದ್ದೇನೆ ಎಂದು ನಾನು ಯೋಚಿಸಿದ್ದೆ. ಈ ಋತುವಿನ ಅಂತ್ಯಕ್ಕೆ ಬಾರ್ಸಿಲೋನವನ್ನು ಬಿಡಬೇಕೇ, ಬೇಡವೇ ಎಂಬ ಕುರಿತು ಯೋಚಿಸುವೆ’’ ಎಂದು ಮೆಸ್ಸಿ ಹೇಳಿದ್ದಾರೆ.

"ಕ್ಲಬ್‌ನ್ನು ತ್ಯಜಿಸುವ ಏಕೈಕ ಮಾರ್ಗವೆಂದರೆ 700 ಮಿಲಿಯನ್ ಯುರೋ(830 ಮಿಲಿಯನ್ ಡಾಲರ್)ಷರತ್ತು ಪಾವತಿಸುವುದು ಎಂದು ಅಧ್ಯಕ್ಷರು ನನಗೆ ಹೇಳಿದ್ದಾರೆ. ಇದು ನನ್ನಿಂದ ಅಸಾಧ್ಯ. ಈ ಕಾರಣದಿಂದ ನಾನು ಕ್ಲಬ್‌ನಲ್ಲಿ ಮುಂದುವರಿಯಲು ನಿರ್ಧರಿಸಿದ್ದೇನೆ'' ಎಂದು ಮೆಸ್ಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News