ಇನ್ನೂ ಕೆಲವು ಪಂದ್ಯಗಳಿಗೆ ಬ್ರಾವೊ ಲಭ್ಯವಿಲ್ಲ: ಫ್ಲೆಮಿಂಗ್

Update: 2020-09-20 17:50 GMT

ಅಬುಧಾಬಿ, ಸೆ.20: ಸ್ಟಾರ್ ಆಲ್‌ರೌಂಡರ್ ಡ್ವೇಯ್ನಾ ಬ್ರಾವೊ 13ನೇ ಆವೃತ್ತಿಯ ಐಪಿಎಲ್‌ನ ಇನ್ನೂ ಕೆಲವು ಪಂದ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ದೃಢಪಡಿಸಿದರು.

 ವಿಂಡೀಸ್ ಆಟಗಾರ ಬ್ರಾವೊ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಇವರ ಅನುಪಸ್ಥಿತಿಯಲ್ಲೂ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಶನಿವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವಿನ ಆರಂಭ ಪಡೆದಿದೆ.

 ಡ್ವೇಯ್ನ ಬ್ರಾವೊ ಇನ್ನು ಕೆಲವು ಪಂದ್ಯಗಳಲ್ಲಿ ಲಭ್ಯವಿರಲಾರರು ಎಂದು ಫ್ಲೆಮಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬ್ರಾವೊಗೆ ಇತ್ತೀಚೆಗೆ ಕೊನೆಗೊಂಡಿದ್ದ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) ವೇಳೆ ಮಂಡಿನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಫೈನಲ್ ಪಂದ್ಯದಲ್ಲಿ ಬೌಲಿಂಗ್ ಮಾಡಿರಲಿಲ್ಲ. ಚೆನ್ನೈ ಪರವಾಗಿ ಬ್ರಾವೊ ಬದಲಿಗನಾಗಿ ಆಡಿದ್ದ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ 6 ಎಸೆತಗಳಲ್ಲಿ 18 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ರಾಯುಡು ಹಾಗೂ ಪ್ಲೆಸಿಸ್ ಅರ್ಧಶತಕದ ಕೊಡುಗೆಯಿಂದ ಗೆಲುವಿಗೆ ಮುನ್ನುಡಿ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News