×
Ad

ರಾಜಸ್ಥಾನ ರಾಯಲ್ಸ್ ನ ಮೊದಲ ಪಂದ್ಯಕ್ಕೆ ಜೋಸ್ ಬಟ್ಲರ್ ಅಲಭ್ಯ

Update: 2020-09-20 23:22 IST

ದುಬೈ, ಸೆ.20: ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಆಡಲಿರುವ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಕೋವಿಡ್-19 ಶಿಷ್ಟಾಚಾರದ ಹಿನ್ನೆಲೆಯಲ್ಲಿ ಬಟ್ಲರ್ ಈಗಲೂ ತಮ್ಮ ಕುಟುಂಬದೊಂದಿಗೆ ಕ್ವಾರಂಟೈನ್‌ನಲ್ಲಿರುವ ಕಾರಣ ತನ್ನ ತಂಡದ ಪರ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ.

ಆಸ್ಟ್ರೇಲಿಯದ ವಿರುದ್ಧ ಇಂಗ್ಲೆಂಡ್ ಆಡಿದ್ದ ಸೀಮಿತ ಓವರ್ ಸರಣಿಯ ಭಾಗವಾಗಿದ್ದ ಬಟ್ಲರ್ ಏಕದಿನ ಸರಣಿ ಮುಗಿದ ಬಳಿಕ ಗುರುವಾರ ದುಬೈಗೆ ಆಗಮಿಸಿದ್ದರು.

‘‘ನಾನು ಐಪಿಎಲ್‌ನಲ್ಲಿ ಆಡುವುದನ್ನು ಎದುರು ನೋಡುತ್ತಿರುವೆ. ಈ ಬೇಸಿಗೆಯಲ್ಲಿ ನಾನು ಇಂಗ್ಲೆಂಡ್ ತಂಡದಲ್ಲಿ ಸ್ವಲ್ಪ ಕ್ರಿಕೆಟ್ ಆಡಿದ್ದೇನೆ. ಮತ್ತೊಮ್ಮೆ ಆಡಲು ಉತ್ಸುಕನಾಗಿದ್ದೇನೆ. ಕಳೆದ ರಾತ್ರಿ ಐಪಿಎಲ್ ಆರಂಭವಾಗಿದ್ದು ನೋಡಿ ಖುಷಿಯಾಗಿರುವೆ. ದುರದೃಷ್ಟವಶಾತ್ ನಾನು ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ’’ ಎಂದು ಬಟ್ಲರ್ ಹೇಳಿದ್ದಾರೆ.

 ರಾಜಸ್ಥಾನ ರಾಯಲ್ಸ್ ತಂಡ ಸೆ.22ರಂದು ಸಿಎಸ್‌ಕೆ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News