ಬಿಡುಗಡೆಗೊಂಡ ಕೆಲವು ತಾಲಿಬಾನಿಗಳು ಮತ್ತೆ ಯುದ್ಧರಂಗಕ್ಕೆ: ಅಫ್ಘಾನ್ ಅಧಿಕಾರಿ

Update: 2020-09-23 16:17 GMT

ವಾಶಿಂಗ್ಟನ್, ಸೆ. 23: ಶಾಂತಿ ಮಾತುಕತೆಯ ಶರತ್ತಿನಂತೆ ಬಿಡುಗಡೆಗೊಂಡಿರುವ ಹಲವಾರು ತಾಲಿಬಾನಿ ಕೈದಿಗಳು ಮತ್ತೆ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಉನ್ನತ ಅಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಮಂಗಳವಾರ ಹೇಳಿದ್ದಾರೆ.

ಖತರ್‌ನಲ್ಲಿ ತಾಲಿಬಾನ್ ಜೊತೆ ನಡೆಯುತ್ತಿರುವ ಶಾಂತಿ ಮಾತುಕತೆಗಳು ಈವರೆಗೆ ಧನಾತ್ಮಕವಾಗಿವೆ ಎಂದು ಅಫ್ಘಾನಿಸ್ತಾನದ ರಾಷ್ಟ್ರೀಯ ಮರುಸಂಧಾನ ಮಂಡಳಿಯ ಅಧ್ಯಕ್ಷರೂ ಆಗಿರುವ ಅವರು ತಿಳಿಸಿದರು. ಅವರು ಸರಕಾರದ ಶಾಂತಿ ಪ್ರಯತ್ನಗಳ ಮೇಲುಸ್ತುವಾರಿಯನ್ನು ಹೊತ್ತಿದ್ದಾರೆ.

 ಆದರೆ, ಶಾಂತಿ ಮಾತುಕತೆಗೆ ಪೂರ್ವಭಾವಿಯಾಗಿ ಬಿಡುಗಡೆಗೊಂಡಿರುವ 5,000 ತಾಲಿಬಾನಿಗಳ ಪೈಕಿ ಕೆಲವರು ಸರಕಾರದ ವಿರುದ್ಧದ ಯುದ್ಧವನ್ನು ಪುನರಾರಂಭಿಸಿದ್ದಾರೆ ಎಂದು ಅವರು ಹೇಳಿದರು.

‘‘ಕೆಲವರು ಯುದ್ಧಭೂಮಿಗೆ ಮರಳಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಇದು ಸರಕಾರದೊಂದಿಗೆ ಅವರು ಮಾಡಿಕೊಂಡಿರುವ ಒಪ್ಪಂದದ ಉಲ್ಲಂಘನೆಯಾಗಿದೆ’’ ಎಂದು ಅಮೆರಿಕದ ವಿದೇಶ ಸಂಬಂಧಗಳ ಸಮಿತಿಯೊಂದಿಗೆ ಆನ್‌ಲೈನ್ ಸಭೆ ನಡೆಸಿದ ಅಬ್ದುಲ್ಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News