ಅವಶೇಷದ ಢಿಕ್ಕಿ ತಪ್ಪಿಸಲು ಸ್ಥಳ ಬದಲಾಯಿಸಿದ ಬಾಹ್ಯಾಕಾಶ ನಿಲ್ದಾಣ

Update: 2020-09-23 16:54 GMT

ವಾಶಿಂಗ್ಟನ್, ಸೆ. 23: ಬಾಹ್ಯಾಕಾಶದಲ್ಲಿರುವ ಅವಶೇಷವೊಂದು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪ್ಪಳಿಸುವುದನ್ನು ತಪ್ಪಿಸುವುದಕ್ಕಾಗಿ ಗಗನಯಾತ್ರಿಗಳು ಮಂಗಳವಾರ ಅದರ ಸ್ಥಳವನ್ನು ಬದಲಾಯಿಸಿದರು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

ರಶ್ಯ ಮತ್ತು ಅಮೆರಿಕದ ಹಾರಾಟ ನಿಯಂತ್ರಕರು ಎರಡೂವರೆ ನಿಮಿಷಗಳ ಕಾರ್ಯಾಚರಣೆ ನಡೆಸಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಕ್ಷೆಯಲ್ಲಿ ಹೊಂದಾಣಿಕೆ ಮಾಡಿದರು.

ಬಳಿಕ ಅವಶೇಷವು ನಿಲ್ದಾಣದಿಂದ ಸುಮಾರು 1.4 ಕಿಲೋಮೀಟರ್ ಅಂತರದಲ್ಲಿ ಸಾಗಿದವು ಎಂದು ನಾಸಾ ತಿಳಿಸಿದೆ.

ಈ ಕಾರ್ಯಾಚರಣೆ ಬಳಿಕ ಗಗನಯಾನಿಗಳು ತಮ್ಮ ಸಾಮಾನ್ಯ ಚಟುವಟಿಕೆಗಳಿಗೆ ಮರಳಿದರು ಎಂದು ನಾಸಾ ಮುಖ್ಯಸ್ಥ ಜಿಮ್ ಬ್ರೈಡನ್‌ಸ್ಟೈನ್ ಟ್ವಿಟರ್‌ನಲ್ಲಿ ಹೇಳಿದರು.

ಬಾಹ್ಯಾಕಾಶ ನಿಲ್ದಾಣಕ್ಕೆ ಬೆದರಿಕೆಯೊಡ್ಡಿದ ಅವಶೇಷವು ಜಪಾನಿ ರಾಕೆಟೊಂದರ ತುಂಡಾಗಿದೆ. ಈ ರಾಕೆಟ್ 2018ರಲ್ಲಿ 77 ತುಂಡುಗಳಾಗಿ ಸ್ಫೋಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News