ಆಸ್ಟ್ರೇಲಿಯ: ಆಳವಿಲ್ಲದ ನೀರಿನಲ್ಲಿ ಸಿಲುಕಿ 380 ತಿಮಿಂಗಿಲಗಳ ಸಾವು

Update: 2020-09-23 16:30 GMT
ಸಾಂದರ್ಭಿಕ ಚಿತ್ರ

ಸಿಡ್ನಿ (ಆಸ್ಟ್ರೇಲಿಯ), ಸೆ. 23: ದಕ್ಷಿಣ ಆಸ್ಟ್ರೇಲಿಯದಲ್ಲಿ ಆಳವಿಲ್ಲದ ನೀರಿನಲ್ಲಿ ಸಿಕ್ಕಿಹಾಕಿಕೊಂಡು ಕನಿಷ್ಠ 380 ತಿಮಿಂಗಿಲಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ತಾರು ತಿಮಿಂಗಿಲಗಳನ್ನು ಪಾರು ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

  ಪಶ್ಚಿಮ ಆಸ್ಟ್ರೇಲಿಯದ ತಾಸ್ಮೇನಿಯ ಕರಾವಳಿಯಲ್ಲಿರುವ ಮ್ಯಾಕ್ವರೀ ಬಂದರಿನ ಸಮೀಪದ ನೀರಿನಲ್ಲಿ ಸುಮಾರು 460 ಪೈಲಟ್ ತಿಮಿಂಗಿಲಗಳು ಸಿಕ್ಕಿಹಾಕಿಕೊಂಡಿದ್ದವು. ಈ ಪೈಕಿ ಹೆಚ್ಚಿನವು ಮೃತಪಟ್ಟಿವೆ.

‘‘ಈ ಪ್ರದೇಶದಲ್ಲಿ ಈಗ 30 ಜೀವಂತ ತಿಮಿಂಗಿಲಗಳಿವೆ. ಅವುಗಳನ್ನು ರಕ್ಷಿಸಲು ಪ್ರಯತ್ನಗಳು ಸಾಗುತ್ತಿವೆ. ಸುಮಾರು 50 ತಿಮಿಂಗಿಲಗಳನ್ನು ರಕ್ಷಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ’’ ಎಂದು ತಾಸ್ಮೇನಿಯದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News