ಬಿಸಿಸಿಐ ಮಹಿಳಾ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೀತು ಡೇವಿಡ್ ಆಯ್ಕೆ

Update: 2020-09-26 14:13 GMT

ಹೊಸದಿಲ್ಲಿ, ಸೆ.26: ಭಾರತದ ಓರ್ವ ಶ್ರೇಷ್ಠ ಮಹಿಳಾ ಕ್ರಿಕೆಟರ್ ನೀತು ಡೇವಿಡ್ ಮಹಿಳಾ ಆಯ್ಕೆ ಸಮಿತಿಯ ಅಧ್ಯಕ್ಷೆಯಾಗಿ ಅಯ್ಕೆಯಾಗಿರುವುದಾಗಿ ಬಿಸಿಸಿಐ ಶನಿವಾರ ಘೋಷಿಸಿದೆ.

ನೀತು ಅವರು ಹೇಮಲತಾ ಕಾಲಾ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ.

ಆಯ್ಕೆ ಸಮಿತಿಯಲ್ಲಿರುವ ಇತರ ಸದಸ್ಯರುಗಳೆಂದರೆ: ಮಿಥು ಮುಖರ್ಜಿ, ರೇಣು ಮಾರ್ಗರೆಟ್,  ಆರತಿ ವೈದ್ಯ ಹಾಗೂ ವಿ. ಕಲ್ಪನಾ. ಇವರೆಲ್ಲರೂ ಮಾಜಿ ಭಾರತದ ಕ್ರಿಕೆಟ್ ಆಟಗಾರ್ತಿಯರಾಗಿದ್ದಾರೆ.

ಕಾಲಾ ನೇತೃತ್ವದ ಆಯ್ಕೆ ಸಮಿತಿಯ ನಾಲ್ಕು ವರ್ಷಗಳ ಅಧಿಕಾರದ ಅವಧಿಯು ಮಾರ್ಚ್ 2020ಕ್ಕೆ ಅಂತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News