ಆಸ್ಟ್ರೇಲಿಯದ ವನಿತೆಯರಿಗೆ ಜಯ

Update: 2020-09-27 04:32 GMT

ಬ್ರಿಸ್ಬೇನ್, ಸೆ.26: ಸುಮಾರು ಏಳು ತಿಂಗಳಲ್ಲಿ ಆಸ್ಟ್ರೇಲಿಯದ ಮಹಿಳಾ ತಂಡ ಆಡಿದ ಮೊದಲ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ನ್ಯೂಝಿಲ್ಯಾಂಡ್ ವಿರುದ್ಧ 17 ರನ್‌ಗಳ ಜಯ ಸಾಧಿಸಿದೆ.

ಆ್ಯಲನ್ ಬಾರ್ಡರ್ ಫೀಲ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಅಶ್ಲೀ ಗಾರ್ಡನೆರ್ (61) ಅರ್ಧಶತಕದ ನೆರವಿನಲ್ಲಿ ಆಸ್ಟ್ರೇಲಿಯ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿತ್ತು.

 ಗೆಲುವಿಗೆ 139 ರನ್ ಮಾಡಬೇಕಿದ್ದ ನ್ಯೂಝಿಲ್ಯಾಂಡ್‌ನ ವನಿತೆಯರ ತಂಡ ಮೇಗನ್ ಷುಟ್ (23ಕ್ಕೆ 4) ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿತು. ತಂಡದ ಪರ ಸುಝೈ ಬೇಟ್ಸ್ (33) ಗಳಿಸಿರುವುದು ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

ಇಂಗ್ಲೆಂಡ್‌ನ ವನಿತೆಯರಿಗೆ ಜಯ: ಡರ್ಬಿ ಕೌಂಟಿ ಗ್ರೌಂಡ್‌ನಲ್ಲಿ ನಡೆದ ವನಿತೆಯರ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 20 ರನ್‌ಗಳ ಅಂತರದಲ್ಲಿ ಜಯ ಗಳಿಸಿದೆ.

 155 ರನ್‌ಗಳ ಸವಾಲನ್ನು ಪಡೆದ ವೆಸ್ಟ್‌ಇಂಡೀಸ್‌ನ ಮಹಿಳಾ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 134 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್ ವುಮನ್ ಡಿಯಾಂದ್ರ ದೊತ್ತಿನ್( 63) ಅರ್ಧಶತಕ ಗಳಿಸಿದರು.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸಿತ್ತು. ನಟಾಲಿಯಾ ಸ್ಕೀವೆರ್ 82 ರನ್(61ಎ, 9ಬೌ,1ಸಿ) ಗಳಿಸಿ ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಪ್ಲೇಯರ್ ಆಫ್ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News