ಮಯಾಂಕ್ ಭರ್ಜರಿ ಶತಕ, ಮತ್ತೆ ಮಿಂಚಿದ ರಾಹುಲ್: ರಾಜಸ್ಥಾನಕ್ಕೆ 224 ರನ್ ಗುರಿ ನೀಡಿದ ಪಂಜಾಬ್

Update: 2020-09-27 15:44 GMT

ಶಾರ್ಜಾ: ಆರಂಭಿಕ ಆಟಗಾರರಾದ ಮಯಾಂಕ್ ಅಗರವಾಲ್ ಹಾಗೂ ಕೆ.ಎಲ್ ರಾಹುಲ್ ಭರ್ಜರಿ ಆಟದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ್ದು, ರಾಯಲ್ಸ್ ಗೆಲುವಿಗೆ 224 ರನ್ ಗಳ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮಯಾಂಕ್ ಅಗರವಾಲ್ ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಮಯಾಂಕ್ ಕೇವಲ 50 ಎಸೆತಗಳಲ್ಲಿ 106 ರನ್ (10 ಬೌಂಡರಿ, 6 ಸಿಕ್ಸ್) ಗಳಿಸಿ ಮಿಂಚಿದರು. ಮತ್ತೊಂದೆಡೆ ತಂಡದ ನಾಯಕ ಕೆ.ಎಲ್ ರಾಹುಲ್ 54 ಎಸೆತಗಳಲ್ಲಿ 69 ರನ್ ಗಳಿಸಿದರು. ಕೊನೆಯಲ್ಲಿ ಮ್ಯಾಕ್ಸ್ ವೆಲ್ 13 ರನ್ ಹಾಗೂ ನಿಕೋಲಸ್ ಪೂರನ್ 8 ಎಸೆತಗಳಲ್ಲಿ 25 ರನ್ ಸಿಡಿಸಿದರು.

ರಾಜಸ್ಥಾನ ರಾಯಲ್ಸ್ ಪರ ಟಾಮ್ ಕುರ್ರನ್ ಹಾಗೂ ಅಂಕಿತ್ ರಜಪೂರ್ ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News