ರಾಜಸ್ಥಾನ್ ರಾಯಲ್ಸ್ ವಿರುದ್ಧ 37 ರನ್ ಗಳಿಂದ ಗೆದ್ದ ಕೆಕೆಆರ್

Update: 2020-09-30 17:58 GMT

ದುಬೈ, ಸೆ.30: ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 37 ರನ್ ಗಳಿಂದ ಜಯ ಗಳಿಸಿದೆ.

ಗೆಲುವಿಗೆ 175 ರನ್ ಗುರಿ ಪಡೆದ ರಾಜಸ್ಥಾನ್ ತಂಡವು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರಾಜಸ್ಥಾನದ ಪರ ಟಾಮ್ ಕುರ್ರನ್ ಏಕಾಂಗಿ ಹೋರಾಟ ಪ್ರದರ್ಶಿಸಿದರು. ಅವರು 36 ಎಸೆತಗಳಲ್ಲಿ 54 ರನ್ ಗಳಿಸಿ ಔಟಾಗದೇ ಉಳಿದರು.

ಕೊಲ್ಕತ್ತಾ ಪರ ಶಿವಮ್ ಮಾವಿ, ಕಮಲೇಶ್ ನಾಗರಕೋಟಿ ಹಾಗೂ ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಆರಂಭಿಕ ಆಟಗಾರ ಶುಭಮನ್ ಗಿಲ್ 47 ರನ್ ಬಾರಿಸಿದರು. ಇಯಾನ್ ಮಾರ್ಗನ್ 34, ಆಂಡ್ರೆ ರಸ್ಸೆಲ್ 24, ನಿತೀಶ್ ರಾಣಾ 22 ರನ್ ಗಳಿಸಿದರು.

ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಅರ್ಚರ್ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News