ಮಿಂಚಿದ ಪ್ರಿಯಮ್ ಗರ್ಗ್: ಚೆನ್ನೈ ಗೆಲುವಿಗೆ 165 ರನ್ ಗುರಿ ನೀಡಿದ ಹೈದರಬಾದ್
Update: 2020-10-02 21:18 IST
ಅಬುಧಾಬಿ: ಮಧ್ಯಮ ಕ್ರಮಾಂಕದ ಆಟಗಾರ ಪ್ರಿಯಮ್ ಗರ್ಗ್ ಬಾರಿಸಿದ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಉತ್ತಮ ರನ್ ದಾಖಲಿಸಿದ್ದು, ಚೆನ್ನೈ ಗೆಲುವಿಗೆ 165 ರನ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಪ್ರಿಯಮ್ ಗರ್ಗ್ ಕೇವಲ 26 ಎಸೆತಗಳಲ್ಲಿ 51 ರನ್ ಸಿಡಿಸಿದರು.
ಡೇವಿಡ್ ವಾರ್ನರ್ 28, ಮನೀಶ್ ಪಾಂಡೆ 29, ಅಭಿಶೇಕ್ ಶರ್ಮಾ 31 ರನ್ ಗಳಿಸಿದರು. ಚೆನ್ನೈ ಪರ ದೀಪಕ್ ಚಾಹರ್ 2, ಶಾರ್ದುಲ್ ತಾಕೂರ್, ಪಿಯೂಷ್ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು.