ಗೆಲುವಿನ ದಡ ಸೇರದ ಧೋನಿ ಪಡೆ: ಚೆನ್ನೈಗೆ ಸತತ ಮೂರನೇ ಸೋಲು
Update: 2020-10-02 23:33 IST
ಅಬುಧಾಬಿ: ಕೊನೆಯಲ್ಲಿ ತೀವ್ರ ಹೋರಾಟ ಪ್ರದರ್ಶಿಸಿದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್ ರೈಸರ್ಸ್ ಹೈದರಬಾದ್ ವಿರುದ್ಧ 7 ರನ್ ಗಳಿಂದ ಸೋತಿದ್ದು, ಇದರೊಂದಿಗೆ ಚೆನ್ನೈ ಸತತ ಮೂರನೇ ಸೋಲು ಕಂಡಿದೆ.
ಗೆಲುವಿಗೆ 165 ರನ್ ಗುರಿ ಪಡೆದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕ ಧೋನಿ 47, ರವೀಂದ್ರ ಜಡೇಜ 50 ರನ್ ಗಳಿಸಿದರು.
ಹೈದರಬಾದ್ ಪರ ನಟರಾಜನ್ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಪ್ರಿಯಮ್ ಗರ್ಗ್ ಕೇವಲ 26 ಎಸೆತಗಳಲ್ಲಿ 51 ರನ್ ಸಿಡಿಸಿದರು.
ಡೇವಿಡ್ ವಾರ್ನರ್ 28, ಮನೀಶ್ ಪಾಂಡೆ 29, ಅಭಿಶೇಕ್ ಶರ್ಮಾ 31 ರನ್ ಗಳಿಸಿದರು. ಚೆನ್ನೈ ಪರ ದೀಪಕ್ ಚಾಹರ್ 2, ಶಾರ್ದುಲ್ ತಾಕೂರ್, ಪಿಯೂಷ್ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು.