×
Ad

ಬಾಂಬ್ ಸ್ಫೋಟಕ್ಕೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಶಿನ್ವಾರಿ ಬಲಿ

Update: 2020-10-04 22:36 IST
ಫೋಟೊ ಕೃಪೆ: Twitter

ಕಾಬೂಲ್,ಅ.4: ನಂಗರ್‌ಹಾರ್ ಪ್ರಾಂತದಲ್ಲಿ ಶನಿವಾರ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಅಫ್ಘಾನಿಸ್ತಾನದ ಅಂತರ್ ರಾಷ್ಟ್ರೀಯ ಅಂಪೈರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಸಾವನ್ನಪ್ಪಿದ್ದ್ಜಾರೆಂದು ತಿಳಿದುಬಂದಿದೆ.

36 ವರ್ಷದ ಶಿನ್ವಾರಿ ಹಲವಾರು ದೇಶೀಯ ಹಾಗೂ ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

 ನಂಗರ್‌ಹಾರ್ ಪ್ರಾಂತದ ಸರಕಾರಿ ಕಾರ್ಯಾಲಯದ ಮುಂದೆ ನಡೆದ ಕಾರ್‌ಬಾಂಬ್ ಸ್ಫೋಟದಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದರು ಹಾಗೂ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News