×
Ad

ಪೊಲಾರ್ಡ್ ಸವಾಲು ಸ್ವೀಕರಿಸಿ ಗಡ್ಡ ಬೋಳಿಸಿಕೊಂಡ ದಿನೇಶ್ ಕಾರ್ತಿಕ್

Update: 2020-10-07 20:55 IST

ದುಬೈ: ಕೋಲ್ಕನಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಬುಧವಾರ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡರು.

ಇಷ್ಟು ದಿನ ಗಡ್ಡ ಬಿಟ್ಟುಕೊಂಡಿದ್ದ ಕಾರ್ತಿಕ್ ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲಾರ್ಡ್ ನೀಡಿದ ಬ್ರೇಕ್ ದಿ ಬಿಯರ್ಡ್ ಸವಾಲನ್ನು ಸ್ವೀಕರಿಸಿದರು.

ಕಿರೋನ್ ಪೊಲಾರ್ಡ್ ನಿಮ್ಮ ಸವಾಲನ್ನು ಸ್ವೀಕರಿಸಲಾಗಿದೆ. ಐಪಿಎಲ್ ಋತು ತೀವ್ರಗೊಳ್ಳುತ್ತಿದ್ದಂತೆ ಹೊಸ ಮಟ್ಟಕ್ಕೇರಿರುವ ಸಮಯ ಬಂದಿದೆ. ಗಡ್ಡ ಬೋಳಿಸುವ ಸವಾಲನ್ನು  ಮುರಿಯಲಾಗಿದೆ ಎಂದು ಇನ್ ಸ್ಟಾಗ್ರಾಮ್ ನ ವೀಡಿಯೊದ ಕೆಳಗೆ ಕಾರ್ತಿಕ್ ಬರೆದಿದ್ದಾರೆ.

ಮಂಗಳವಾರ ಹಾರ್ದಿಕ್ ಪಾಂಡ್ಯ ಅವರಿಂದ ಸೂಚನೆ ಪಡೆದಿದ್ದ ಪೊಲಾರ್ಡ್ ಗಡ್ಡ ತೆಗೆಯುವ ಸವಾಲನ್ನು ಮುರಿಯುವುದರಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಈ ಕಾರ್ಯಕ್ಕೆ ಕೆಕೆಆರ್ ನಾಯಕನನ್ನು ನಾಮನಿರ್ದೇಶನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News