5.79 ಕೋಟಿ ಜನರಿಂದ ಪೆನ್ಸ್, ಕಮಲಾ ನಡುವಿನ ಚರ್ಚೆ ವೀಕ್ಷಣೆ

Update: 2020-10-09 17:22 GMT

ಲಾಸ್ ಏಂಜಲಿಸ್ (ಅಮೆರಿಕ), ಅ. 9: ಅಮೆರಿಕದ ಉಪಾಧ್ಯಕ್ಷ ಹಾಗೂ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮೈಕ್ ಪೆನ್ಸ್ ಮತ್ತು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ಬುಧವಾರ ರಾತ್ರಿ ನಡೆದ ಮುಖಾಮುಖಿ ಚರ್ಚೆಯನ್ನು ಟೆಲಿವಿಶನ್‌ನಲ್ಲಿ 5.79 ಕೋಟಿ ವೀಕ್ಷಕರು ವೀಕ್ಷಿಸಿದ್ದಾರೆ. ಇದು ಉಪಾಧ್ಯಕ್ಷ ಅಭ್ಯರ್ಥಿಗಳ ನಡುವಿನ ಮುಖಾಮುಖಿಯೊಂದರ ಎರಡನೇ ಅತಿ ಹೆಚ್ಚಿನ ವೀಕ್ಷಕ ಸಂಖ್ಯೆಯಾಗಿದೆ.

ಸಾಲ್ಟ್‌ಲೇಕ್ ಸಿಟಿಯಲ್ಲಿ ನಡೆದ ಕಾರ್ಯಕ್ರಮವನ್ನು ಜನರು 18 ಟಿವಿ ನೆಟ್‌ವರ್ಕ್‌ಗಳ ಮೂಲಕ ವೀಕ್ಷಿಸಿದರು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ನಡುವೆ ಸೆಪ್ಟಂಬರ್ 29ರಂದು ನಡೆದ ನೇರ ಮುಖಾಮುಖಿಯನ್ನು ಸುಮಾರು 7.3 ಕೋಟಿ ಜನರು ವೀಕ್ಷಿಸಿದ್ದರು.

2008ರಲ್ಲಿ ನಡೆದ ಉಪಾಧ್ಯಕ್ಷ ಅಭ್ಯರ್ಥಿಗಳ ನಡುವಿನ ನೇರ ಮುಖಾಮುಖಿಯನ್ನು 6.99 ಕೋಟಿ ಮಂದಿ ಟಿವಿಯಲ್ಲಿ ವೀಕ್ಷಿಸಿದ್ದರು. ಅದೊಂದು ದಾಖಲೆಯಾಗಿದೆ. ಅದರ ನಂತರದ ಸ್ಥಾನದಲ್ಲಿ, ಈ ಬಾರಿಯ ಮೈಕ್ ಪೆನ್ಸ್ ಮತ್ತು ಕಮಲಾ ಹ್ಯಾರಿಸ್ ನಡುವಿನ ಚರ್ಚೆ ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News