ಫೆಡರರ್ ಸಾರ್ವಕಾಲಿಕ ಗ್ರ್ಯಾನ್ ಸ್ಲಾಮ್ ದಾಖಲೆ ಸರಿಗಟ್ಟಿದ ನಡಾಲ್
Update: 2020-10-11 22:31 IST
ಪ್ಯಾರಿಸ್: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅವರನ್ನು 6-0, 6-2, 7-5 ಸೆಟ್ ಗಳ ಅಂತರದಿಂದ ಮಣಿಸಿರುವ ಸ್ಪೇನ್ ಸೂಪರ್ ಸ್ಟಾರ್, ರಫೆಲ್ ನಡಾಲ್ 13ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಮೂಲಕ ಸ್ವಿಸ್ ನ ಹಿರಿಯ ಆಟಗಾರ ರೋಜರ್ ಫೆಡರರ್ ಅವರ ಸಾರ್ವಕಾಲಿಕ ದಾಖಲೆ (20 ಗ್ರ್ಯಾನ್ ಸ್ಲಾಮ್)ಯನ್ನು ಸರಿಗಟ್ಟಿದರು.
ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಸೋತಿರುವ ಜೊಕೊವಿಕ್ ಅವರ 18ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಕನಸು ಹಾಗೂ 1969ರ ಬಳಿಕ ಎರಡನೇ ಬಾರಿ ಎಲ್ಲ ನಾಲ್ಕು ಪ್ರಮುಖ ಟ್ರೋಫಿ ಗೆದ್ದ ಸಾಧನೆ ಮಾಡಬೇಕೆಂಬ ಗುರಿ ಈಡೇರಲಿಲ್ಲ. ರೊಲ್ಯಾಂಡ್ ಗ್ಯಾರೊಸ್ ನಲ್ಲಿ 100ನೇ ಗೆಲುವು ದಾಖಲಿಸಿರುವ ನಡಾಲ್ 2005ರಲ್ಲಿ ಚೊಚ್ಚಲ ಪಂದ್ಯ ಆಡಿದ ಬಳಿಕ ಕೇವಲ 2 ಸೋಲು ಕಂಡಿದ್ದಾರೆ.
ಪುರುಷರ ಸಿಂಗಲ್ಸ್: ಗರಿಷ್ಠ ಪ್ರಶಸ್ತಿ ಗೆದ್ದ ಟೆನಿಸ್ ಪಟುಗಳು
ರಫೆಲ್ ನಡಾಲ್-20
ರೋಜರ್ ಫೆಡರರ್-20
ನೊವಾಕ್ ಜೊಕೊವಿಕ್- 17
ಪೀಟ್ ಸಾಂಪ್ರಸ್-14