ರಾಜಸ್ಥಾನದ ಸಹ ಆಟಗಾರ ರಾಹುಲ್ ಗೆ ಅಸ್ಸಾಂನ ಸಾಂಪ್ರದಾಯಿಕ ನೃತ್ಯ ಕಲಿಸಿಕೊಟ್ಟ ರಿಯಾನ್!
ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್ ಮನ್ ರಿಯಾನ್ ಪರಾಗ್ ಹಾಗೂ ರಾಹುಲ್ ತೆವಾಟಿಯಾ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ತಂಡದ 5 ವಿಕೆಟ್ ಗೆಲುವಿಗೆ ನೆರವಾದರು. ರಾಜಸ್ಥಾನ 78 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದಾಗ 6ನೆ ವಿಕೆಟ್ ಗೆ 85 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದ್ದರು.
ಔಟಾಗದೆ 42 ರನ್ ಗಳಿಸಿದ್ದ ಪರಾಗ್ ತಂಡಕ್ಕೆ 2 ಎಸೆತದಲ್ಲಿ 2 ರನ್ ಅಗತ್ಯವಿದ್ದಾಗ ಸಿಕ್ಸರ್ ಸಿಡಿಸಿ ಗೆಲುವಿನ ರನ್ ದಾಖಲಿಸಿದ ಬೆನ್ನಿಗೇ ಹೆಲ್ಮೆಟ್ ತೆಗೆದು, ಬ್ಯಾಟ್ ನ್ನು ಕೆಳಗಿಟ್ಟು ಬಿಹು ನೃತ್ಯ ಮಾಡಲು ಆರಂಭಿಸಿದರು. ಪರಾಗ್ ಅವರು ನೃತ್ಯದ ಮೂಲಕ ಸಂಭ್ರಮಾಚರಿಸುತ್ತಿರುವ ವೀಡಿಯೊವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ.
ಕಳೆದ ವರ್ಷ ಆರ್ ಸಿಬಿ ವಿರುದ್ಧ ವಿಕೆಟ್ ಪಡೆದ ಸಂಭ್ರಮದಲ್ಲಿ ಪರಾಗ್ ನೃತ್ಯಮಾಡಿದ್ದನ್ನು ನಾನು ನೋಡಿದ್ದೆ ಎಂದು ರಾಹುಲ್ ತೆವಾಟಿಯಾ ಹೇಳಿದರು.
"ಹೌದು, ಹೌದು,ಇದು ಅಸ್ಸಾಂ ನಲ್ಲಿ ನಮ್ಮ ಸಾಂಪ್ರದಾಯಿಕ ನೃತ್ಯವಾಗಿದೆ'' ಎಂದು ರಿಯಾನ್ ಪರಾಗ್ ಪ್ರತಿಕ್ರಿಯಿಸಿದರು.
ಪರಾಗ್ ಅವರು ಬಿಹು ನೃತ್ಯವನ್ನು ಹೇಗೆ ಮಾಡಬೇಕೆಂದು ರಾಹುಲ್ ಗೆ ಕಲಿಸಿಕೊಟ್ಟರು. ರಾಹುಲ್ ನೃತ್ಯವನ್ನು ಕಲಿತ್ತಿದ್ದು, ಇದನ್ನು ವೀಕ್ಷಕರು ಸ್ವೀಕರಿಸಿರಬಹುದು.
Is Riyan Parag the best dancer in the IPL?pic.twitter.com/qVLjVAcQvs
— Sreshth Shah (@sreshthx) October 12, 2020