ಕ್ರಿಸ್ಟಿಯಾನೊ ರೊನಾಲ್ಡೊಗೆ ಕೊರೋನ ಪಾಸಿಟಿವ್

Update: 2020-10-13 15:18 GMT

ಮ್ಯಾಡ್ರಿಡ್: ಕ್ರಿಸ್ಟಿಯಾನೊ ರೊನಾಲ್ಡೊಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್ ಮಂಗಳವಾರ ಪ್ರಕಟಿಸಿದೆ.

35ರ ಹರೆಯದ ಜುವೆಂಟಸ್ ಎಫ್ ಸಿಯ ಫಾರ್ವರ್ಡ್ ಆಟಗಾರ, ಪೋರ್ಚುಗಲ್ ನಾಯಕ ರವಿವಾರ  ಫ್ರಾನ್ಸ್ ವಿರುದ್ಧ ನೇಶನ್ ಲೀಗ್  ಗೋಲುರಹಿತ ಪಂದ್ಯದಲ್ಲಿ ಪೋರ್ಚುಗಲ್ ಪರ ಆಡಿದ್ದರು. ಬುಧವಾರ ನಡೆಯಲಿರುವ ಸ್ವೀಡನ್ ವಿರುದ್ಧ ನೇಶನ್ಸ್ ಲೀಗ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News