ಗೆಲುವಿನ ಹಳಿಗೆ ಮರಳಿದ ಚೆನ್ನೈ: ಹೈದರಾಬಾದ್ ವಿರುದ್ಧ 20 ರನ್ ಗಳ ಗೆಲುವು

Update: 2020-10-13 17:53 GMT

ದುಬೈ: ಐಪಿಎಲ್ ಟೂರ್ನಿಯ 29ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ರೋಚಕ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ರನ್ ಗಳ ಗೆಲುವು ಸಾಧಿಸಿದೆ.

ಗೆಲುವಿಗೆ 168 ರನ್ ಗುರಿ ಪಡೆದ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಕೇನ್ ವಿಲಿಯಮ್ಸನ್ 57, ಬೈರ್ ಸ್ಟೋ 23 ರನ್ ಗಳಿಸಿದರು.

ಚೆನ್ನೈ ಪರ ಡ್ವೈಯ್ನ್ ಬ್ರಾವೋ ಹಾಗೂ ಕರ್ನ್ ಶರ್ಮಾ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 167/6 ರನ್ ಗಳಿಸಿತು. ಶೇನ್ ವಾಟ್ಸನ್ 42, ಸ್ಯಾಮ್ ಕುರ್ರಮ್ 31, ಅಂಬಟಿ ರಾಯುಡು 41, ನಾಯಕ ಧೋನಿ 21 ಹಾಗೂ ರವೀಂದ್ರ ಜಡೇಜ 25 ರನ್ ಗಳಿಸಿದರು.

ಹೈದರಾಬಾದ್ ಪರ ಸಂದೀಪ್ ಶರ್ಮಾ, ನಟರಾಜನ್ ಹಾಗೂ ಖಲೀಲ್ ಅಹ್ಮದ್ ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News