ಸರಕು ಹೊತ್ತ ದುಬೈನ ಮೊದಲ ಹಡಗು ಇಸ್ರೇಲ್‌ಗೆ

Update: 2020-10-13 18:04 GMT

ದುಬೈ, ಅ. 13: ಯುಎಇಯಿಂದ ಇಸ್ರೇಲ್‌ಗೆ ಸರಕುಗಳನ್ನು ಹೊತ್ತ ಮೊದಲ ಹಡಗು ಇಸ್ರೇಲ್‌ನ ಹೈಫ ಬಂದರಿನಲ್ಲಿ ಸೋಮವಾರ ಲಂಗರು ಹಾಕಿದೆ.

ಎಮ್‌ಎಸ್‌ಸಿ ಪ್ಯಾರಿಸ್ ಎಂಬ ಹಡಗು ಅಗ್ನಿಶಾಮಕ ಉಪಕರಣಗಳು, ಸ್ವಚ್ಛತಾ ವಸ್ತುಗಳು ಮತ್ತು ಇಲೆಕ್ಟ್ರಾನಿಕ್ ಸಲಕರಣೆಗಳನ್ನು ಹೊತ್ತು ಇಸ್ರೇಲ್‌ನ ಅತಿ ದೊಡ್ಡ ಬಂದರನ್ನು ತಲುಪಿದೆ.

ಈ ಹಡಗು ಪ್ರತಿ ವಾರ ಯುಎಇಯಿಂದ ಇಸ್ರೇಲ್‌ಗೆ ಸರಕುಗಳನ್ನು ಹೊತ್ತು ತರಲಿದೆ ಎಂದು ಹೈಫ ಬಂದರು ತಿಳಿಸಿದೆ. ಸಂಬಂಧಗಳನ್ನು ಸಾಮಾನ್ಯಗೊಳಿಸುವ ಒಪ್ಪಂದಕ್ಕೆ ಉಭಯ ದೇಶಗಳು ಸೆಪ್ಟಂಬರ್ 15ರಂದು ಅಮೆರಿಕದ ಶ್ವೇತಭವನದಲ್ಲಿ ಸಹಿ ಹಾಕಿವೆ.

ಉಭಯ ದೇಶಗಳ ನಡುವಿನ ಸಂಬಂಧ ಸಾಮಾನ್ಯ ಸ್ಥಿತಿಗೆ ಮರಳಿದ ಒಂದು ವರ್ಷದ ಅವಧಿಯಲ್ಲಿ ದ್ವಿಪಕ್ಷೀಯ ವ್ಯಾಪಾರವು 4 ಬಿಲಿಯ ಡಾಲರ್ (ಸುಮಾರು 29,360 ಕೋಟಿ ರೂಪಾಯಿ) ತಲುಪಲಿದೆ ಎಂದು ಇಸ್ರೇಲ್ ಅಧಿಕಾರಿಗಳು ಅಂದಾಜಿಸಿದ್ದಾರೆ.

ಸರಕು ಹಡಗು ದುಬೈಯ ಜೆಬೆಲ್ ಅಲಿ ಬಂದರಿನಿಂದ ಹೊರಟು ಸುಮಾರು 15 ದಿನಗಳ ಬಳಿಕ ಹೈಫ ಬಂದರನ್ನು ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News