ಸಂಘಟಿತ ಪ್ರದರ್ಶನ: ರಾಜಸ್ಥಾನ ವಿರುದ್ಧ ಡೆಲ್ಲಿಗೆ 13 ರನ್ ಗಳ ಜಯ

Update: 2020-10-14 17:46 GMT

ದುಬೈ: ಉತ್ತಮ ಆರಂಭ ಪಡೆದರೂ ಕೊನೆಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ರಾಜಸ್ಥಾನ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 13 ರನ್ ಗಳ ಸೋಲು ಕಂಡಿದೆ.

ಗೆಲುವಿಗೆ 162 ರನ್ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ನಿಗದಿತ 20 ಎಸೆತಗಳಲ್ಲಿ 8 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಲಷ್ಟೇ ಶಕ್ತವಾಯಿತು. ಬೆನ್ ಸ್ಟೋಕ್ಸ್ 41, ರಾಬಿನ್ ಉತ್ತಪ್ಪ 32, ಸಂಜು ಸ್ಯಾಮ್ಸನ್ 25 ರನ್ ಬಾರಿಸಿದರು. 

ಡೆಲ್ಲಿ ಕ್ಯಾಪಿಟಲ್ಸ್ ಪರ ತುಶಾರ್ ದೇಶಪಾಂಡೆ ಹಾಗೂ ಅನ್ರಿಚ್ ನೋರ್ಜೆ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 161 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News