2021ರಲ್ಲಿ ಅಭಿಮಾನಿಗಳ ಅನುಪಸ್ಥಿತಿಯಲ್ಲಿ ವಿಂಬಲ್ಡನ್

Update: 2020-10-16 18:40 GMT

ಲಂಡನ್: ಮುಂದಿನ ವರ್ಷ ವಿಂಬಲ್ಡನ್ ಗ್ರಾನ್ ಸ್ಲಾಮ್ ಪಂದ್ಯಾವಳಿಯನ್ನು ಮುಚ್ಚಿದ ಬಾಗಿಲುಗಳ ಹಿಂದೆ ನಡೆಸಲಾಗುವುದು ಎಂದು ಸಂಘಟಕರು ಶುಕ್ರವಾರ ಪ್ರಕಟಿಸಿದ್ದಾರೆ.

 ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ್ನು ರದ್ದುಪಡಿಸಲಾಯಿತು.

 ಕೋವಿಡ್-19 ಟೆನಿಸ್‌ಗೆ ಈ ವರ್ಷ ಅಡ್ಡಿಪಡಿಸಿತ್ತು. ಆದರೆ ಯುಎಸ್ ಓಪನ್ ಮುಚ್ಚಿದ ಬಾಗಿಲುಗಳ ಹಿಂದೆ ನಡೆಯಿತು. ಫ್ರೆಂಚ್ ಓಪನ್ ಮೇನಿಂದ ಸೆಪ್ಟಂಬರ್ ಅಂತ್ಯಕ್ಕೆ ಸ್ಥಳಾಂತರಿಸಿದ ನಂತರ ಕೇವಲ 1,000 ಅಭಿಮಾನಿಗಳ ಮುಂದೆ ನಡೆಯಿತು.

   ‘‘2021ರಲ್ಲಿ ಚಾಂಪಿಯನ್‌ಶಿಪ್‌ಗಳನ್ನು ನಡೆಸು ವುದು ನಮ್ಮ ಪ್ರಥಮ ಆದ್ಯತೆಯಾಗಿದೆ ಮತ್ತು ಆ ಆದ್ಯತೆಯನ್ನು ತಲುಪಿಸುವ ಸಲುವಾಗಿ ನಾವು ಸನ್ನಿವೇಶ-ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ ’’ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಲಿ ಬೋಲ್ಟನ್ ಹೇಳಿದರು.

 134 ನೇ ವಿಂಬಲ್ಡನ್ ಚಾಂಪಿಯನ್‌ಶಿಪ್‌ಗಳನ್ನು 2021 ಜೂನ್ 28 ರಿಂದ ಜುಲೈ 11 ರವರೆಗೆ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News