ಮುಂದಿನ ವರ್ಷ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ಪಿ.ವಿ. ಸಿಂಧು ವಾಪಸ್

Update: 2020-10-17 04:09 GMT

 ಬೆಂಗಳೂರು: ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಈ ವರ್ಷ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ಮರಳದಿರಲು ನಿರ್ಧರಿಸಿದ್ದಾರೆ. ಮುಂದಿನ ವರ್ಷ ಸ್ಪರ್ಧಾತ್ಮಕ ಬ್ಯಾಡ್ಮಿಂ ಟನ್‌ಗೆ ವಾಪಸಾಗಲಿದ್ದಾರೆ. ಕೋವಿಡ್-19 ಬಿಕ್ಕಟ್ಟಿನಿಂದಾಗಿ ಏಳು ತಿಂಗಳ ಸ್ಥಗಿತದ ನಂತರ ಬ್ಯಾಡ್ಮಿಂಟನ್ ಟೂರ್ನಿ ಮತ್ತೆ ಆರಂಭಗೊಂಡಿದೆ. ಈ ವರ್ಷದ ಕೊನೆಯ ಟೂರ್ನಿ ಎನಿಸಿಕೋಂಡಿರುವ ಡೆನ್ಮಾರ್ಕ್ ಓಪನ್‌ನಿಂದ ಸಿಂಧು ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

 ನಾಲ್ಕು ತಿಂಗಳ ವಿರಾಮದ ನಂತರ ಆಗಸ್ಟ್‌ನಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ಪುನರಾರಂಭಿಸಿರುವ ಸಿಂಧು ಏಶ್ಯ ಓಪನ್ 1 (ಜನವರಿ 12-17) ಮತ್ತು ಏಶ್ಯ ಓಪನ್ 2 ಆಡಲು ನಿರ್ಧರಿಸಿದ್ದಾರೆ.

 ‘‘ನಾನು ಬ್ಯಾಡ್ಮಿಂಟನ್ ಆಡುವು ದನ್ನು ತಪ್ಪಿಸಿಕೊಂಡಿದ್ದೇನೆ, ಆದರೆ ನಾನು ಪ್ರತಿದಿನ ಮನೆಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಹಾಗಾಗಿ ನಾನು ಉತ್ತಮ ಸ್ಥಿತಿ ಯಲ್ಲಿದ್ದೇನೆ’’ ಎಂದು ವಿಶ್ವದ 7ನೇ ಕ್ರಮಾಂಕದ ಸಿಂಧು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

ಮಾರ್ಚ್‌ನಲ್ಲಿ ನಡೆದ ಆಲ್ ಇಂಗ್ಲೆಂಡ್ ಓಪ ನ್‌ನಲ್ಲಿ ಕೊನೆಯ ಬಾರಿಗೆ ಆಡಿದ ಸಿಂಧು, ತನ್ನ ಅಡುಗೆ ಕೌಶಲ್ಯವನ್ನು ಸುಧಾರಿಸುವ ಮೂಲಕ ಲಾಕ್‌ಡೌನ್ ಸಮಯದ ಸದಪಯೋಗ ಮಾಡಿದ್ದರು.

‘‘ನಾನು ಸಕಾರಾತ್ಮಕವಾಗಿದ್ದೇನೆ ಮತ್ತು ನಾನು ಅಭ್ಯಾಸ ಮಾಡುತ್ತಿದ್ದೇನೆ ಆದ್ದರಿಂದ ಎಲ್ಲವೂ ಚೆನ್ನಾಗಿ ನಡೆಯುತ್ತದೆ ’’ಎಂದು ನಾನು ಭಾವಿಸುತ್ತೇನೆ ಎಂದು ಸಿಂಧು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News