ಒಲಿಂಪಿಕ್ಸ್ ಗೆ ಭಾರತದ ಹಾಕಿ ತಂಡ ಉತ್ತಮವಾಗಿ ರೂಪುಗೊಳ್ಳುತ್ತಿದೆ: ಕೊಥಾಜಿತ್

Update: 2020-10-22 18:16 GMT

ಹೊಸದಿಲ್ಲಿ, ಅ.22: ಕೋವಿಡ್-19 ಬಲವಂತದ ವಿರಾಮದ ನಂತರ ಭಾರತದ ಪುರುಷರ ಹಾಕಿ ತಂಡವು ಸರಿಯಾದ ಸಮಯದಲ್ಲಿ ತರಬೇತಿಯನ್ನು ಪುನರಾರಂಭಿಸಿದೆ ಮತ್ತು ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ ್ಸಗೆಉತ್ತಮ ತಂಡ ರೂಪುಗೊಳ್ಳಲಿದೆ ಎಂದು ತಂಡದ ಡಿಫೆಂಡರ್ ಕೊಥಾಜಿತ್ ಸಿಂಗ್ ನಂಬಿದ್ದಾರೆ.

  ಕೋವಿಡ್-19 ವೈರಸ್ ಸೋಂಕು ಹರಡುವಿಕೆಯಿಂದಾಗಿ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳ ರಾಷ್ಟ್ರೀಯ ಶಿಬಿರಗಳು ಕಳೆದ ಆಗಸ್ಟ್ ನಲ್ಲಿ 45 ದಿನಗಳ ವಿರಾಮದ ನಂತರ ಇಲ್ಲಿನ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ಪುನರಾರಂಭಗೊಂಡವು.

 ‘‘ಪಿಚ್‌ಗೆ ಮರಳಲು ತುಂಬಾ ಸಂತೋಷವಾಗಿದೆ. ಕಳೆದ ಎರಡು ತಿಂಗಳುಗಳಲ್ಲಿ ನಾವು ಸಾಕಷ್ಟು ಸುಧಾರಣೆಗಳನ್ನು ಕಂಡಿದ್ದೇವೆ ಮತ್ತು ನಾವು ಒಲಿಂಪಿಕ್ಸ್‌ಗೆ ಉತ್ತಮವಾಗಿ ರೂಪುಗೊಳ್ಳುತ್ತಿದೆೆ’’ಎಂದು 200 ಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮಣಿಪುರದ ಆಟಗಾರ ಕೊಥಾಜಿತ್ ಸಿಂಗ್ ಹೇಳಿದ್ದಾರೆ.

 ‘‘ನಾವು ಸರಿಯಾದ ಸಮಯದಲ್ಲಿ ಪಿಚ್‌ಗೆ ಮರಳಿದ್ದೇವೆ. ನಮ್ಮ ಪೂರ್ಣ ಸ್ವರೂಪಕ್ಕೆ ಮರಳಲು ಮತ್ತು ಉತ್ತಮ ತಂಡವಾಗಿ ರೂಪುಗೊಳ್ಳಲು ನಮಗೆ ಸಾಕಷ್ಟು ಸಮಯ ಇದೆ’’ಎಂದು ಅಭಿಪ್ರಾಯಪಟ್ಟಿದ್ದಾರೆ.

 ಈ ವರ್ಷದ ಆರಂಭದಲ್ಲಿ ಒಲಿಂಪಿಕ್ ಕ್ವಾಲಿಫೈಯರ್‌ಗಳನ್ನು ಕಳೆದುಕೊಂಡ ನಂತರ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಿದ ಕೊಥಾಜಿತ್ ಕಷ್ಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಮುಂದೆ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ.

 ‘‘ತಂಡದಿಂದ ಹೊರಗುಳಿಯುವುದು ಎಂದಿಗೂ ಸುಲಭವಲ್ಲ. ಆದ ಕಾರಣ ತಂಡದಲ್ಲಿ ನನ್ನ ಸ್ಥಾನವನ್ನು ಭದ್ರಪ ಡಿಸಿಕೊಳ್ಳಲು ಸಾಧ್ಯವಾದಷ್ಟು ಶ್ರಮಿಸಲು ನಾನು ನಿರ್ಧರಿಸಿದ್ದೇನೆ’’ ಎಂದು ಅವರು ಹೇಳಿದರು.

‘‘ಲಾಕ್‌ಡೌನ್ ಸಮಯದಲ್ಲಿ ನಾನು ನನ್ನ ಆಟವನ್ನು ಸಂಪೂರ್ಣವಾಗಿ ವಿಶ್ಲೇಷಿಸಿದ್ದೇನೆ ಮತ್ತು ನಾನು ಕೆಲಸ ಮಾಡಬೇಕಾದ ನನ್ನ ಆಟದ ಅಂಶಗಳನ್ನು ನಾನು ತಿಳಿದಿದ್ದೇನೆ. ಒಲಿಂಪಿಕ್ಸ್‌ನ್ನು ಮುಂದೂಡಿರುವು ದರಿಂದ ಮುಂದಿನ ಕೆಲವು ತಿಂಗಳುಗಳು ನಮ್ಮೆಲ್ಲರಿಗೂ ಬಹಳ ನಿರ್ಣಾಯಕವಾಗಿದೆ. ನಮ್ಮ ವೈಯಕ್ತಿಕ ಮತ್ತು ತಂಡದ ಆಟವನ್ನು ಬಲಪಡಿಸಲು ನಮಗೆ ಉತ್ತಮ ಅವಕಾಶವಿದೆ’’ ಎಂದು 28ರ ಹರೆಯದ ಕೊಥಾಜಿತ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News