ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಪ್ಲೇಆಫ್ ತಲುಪಲು ವಿಫಲವಾದ ಚೆನ್ನೈ

Update: 2020-10-23 17:19 GMT

ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಹೀನಾಯವಾಗಿ ಸೋಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 13ನೇ ಆವೃತ್ತಿಯ ಐಪಿಎಲ್ ಪ್ಲೇಆಫ್ ನಿಂದ ಹೊರಬಿದ್ದಿದ್ದು, ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಪ್ಲೇಆಫ್ ತಲುಪದೆ ಗ್ರೂಪ್ ಹಂತದಲ್ಲೇ ನಿರ್ಗಮಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಆರಂಭಿಕ ಕುಸಿತದ ಹೊರತಾಗಿಯೂ ನಿಗದಿತ 20 ಓವರ್ ಗಳಲ್ಲಿ 114/9 ರನ್ ಗಳಿಸಿತು. ಸ್ಯಾಮ್ ಕರ್ರನ್ ಮಾತ್ರ ತಂಡದ ಪರ ಏಕಾಂಗಿ ಹೋರಾಟ ಪ್ರದರ್ಶಿಸಿದರು. ಕರ್ರನ್ 47 ಎಸೆತಗಳಲ್ಲಿ 52 ರನ್ ಬಾರಿಸಿದರು.

ಒಂದು ಹಂತದಲ್ಲಿ ಚೆನ್ನೈ ಕೇವಲ 3 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ತಂಡಕ್ಕೆ ಕರ್ರನ್ ಅರ್ಧಶತಕ ಬಾರಿಸುವ ಮೂಲಕ ನೆರವಾದರು.

ಮುಂಬೈ ಇಂಡಿಯನ್ಸ್ ಪರ ಟೆಂಟ್ ಬೌಲ್ಟ್ 4, ಬುಮ್ರಾ ಹಾಗೂ ರಾಹುಲ್ ಚಾಹರ್ ತಲಾ 2 ವಿಕೆಟ್ ಪಡೆದರು.

115 ರನ್ ಗಳ ಸುಲಭ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಕೇವಲ 12.2 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು. ಆರಂಭಿಕ ಆಟಗಾರರಾದ ಕ್ವಿಂಟನ್ ಡಿಕಾಕ್ 46 (37ಎಸೆತ) ಮತ್ತು ಇಶಾನ್ ಕಿಶಾನ್ 68 ( 37 ಎಸೆತ) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಈ ಸೋಲಿನೊಂದಿಗೆ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನ ಪ್ಲೇಆಫ್ ಬಾಗಿಲು ಬಂದಾಯಿತು. ತಾನಾಡಿದ 11 ಪಂದ್ಯಗಳಲ್ಲಿ ಚೆನ್ನೈ ಕೇವಲ 3 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿದ್ದು, 8ರಲ್ಲಿ ಸೋತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News