ಫ್ರಾನ್ಸ್ ಫುಟ್ಬಾಲ್ ತಂಡ ತ್ಯಜಿಸಿದ ವರದಿಗೆ ಪೌಲ್ ಪೊಗ್ಬಾ ಪ್ರತಿಕ್ರಿಯಿಸಿದ್ದು ಹೀಗೆ...

Update: 2020-10-26 11:59 GMT

ಪ್ಯಾರಿಸ್:ಅಂತರ್ ರಾಷ್ಟ್ರೀಯ ಉಗ್ರವಾದದ ಮೂಲ ಇಸ್ಲಾಂ ಎಂದು  ಫ್ರಾನ್ಸ್  ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ಸ್ ಅವರ ಹೇಳಿಕೆ ಖಂಡಿಸಿ ತಾನು ಫ್ರಾನ್ಸ್ ಪರ ಅಂತರ್ ರಾಷ್ಟ್ರೀಯ ಫುಟ್ಬಾಲ್ ಅಡುವುದನ್ನು ನಿಲ್ಲಿಸಿದ್ದೇನೆ ಎಂಬ ವರದಿಗಳನ್ನು ಫುಟ್ಬಾಲ್ ನ ಸ್ಟಾರ್ ಆಟಗಾರ ಪೌಲ್ ಪೊಗ್ಬಾ ತಳ್ಳಿ ಹಾಕಿದ್ದಾರೆ.

ಇಸ್ಲಾಂ ಕುರಿತು ಫ್ರೆಂಚ್ ಅಧ್ಯಕ್ಷರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಪೊಗ್ಬಾ ಅಂತರ್ ರಾಷ್ಟ್ರೀಯ ಫುಟ್ಬಾಲ್ ನ್ನುತ್ಯಜಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.

ಸೋಮವಾರ ತನ್ನ ಅಧಿಕೃತ ಇನ್ ಸ್ಟಾಗ್ರಾಮ್ ನಲ್ಲಿ ತಾನು ಫುಟ್ಬಾಲ್ ತ್ಯಜಿಸಿರುವ ಕುರಿತ ವರದಿಯನ್ನು ನಿರಾಕರಿಸಿದರು. ತನ್ನ ಇನ್ ಸ್ಟಾಗ್ರಾಮ್ ನಲ್ಲಿ ವರದಿಯ ಚಿತ್ರವೊಂದನ್ನು ಹಂಚಿಕೊಂಡಿರುವ ಪೊಗ್ಬಾ, "ಇದು ಅಸ್ವೀಕಾರಾರ್ಹ ನಕಲಿ ಸುದ್ದಿಗಳಾಗಿವೆ'' ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News