ಕ್ರಿಕೆಟ್ ದಕ್ಷಿಣ ಆಫ್ರಿಕಾದ ಮಂಡಳಿ ನಿರ್ದೇಶಕರ ರಾಜೀನಾಮೆ

Update: 2020-10-26 12:58 GMT

ಜೋಹಾನ್ಸ್ ಬರ್ಗ್: ಕ್ರಿಕೆಟ್ ದಕ್ಷಿಣ ಆಫ್ರಿಕಾದ 10 ಸದಸ್ಯರ ನಿರ್ದೇಶಕರ ಮಂಡಳಿ ರಾಜೀನಾಮೆ ನೀಡಿದ್ದು, ಬಿಕ್ಕಟ್ಟಿನಿಂದ ಕೂಡಿರುವ ಕ್ರಿಕೆಟ್ ಮಂಡಳಿಯ ಮಧ್ಯಂತರ ಆಡಳಿತಕ್ಕಿದ್ದ ತಡೆ ತೆರವುಗೊಂಡಿದೆ. ಒಲಿಂಪಿಕ್ಸ್ ಮಂಡಳಿಯು ಮಧ್ಯಂತರ ಸಮಿತಿಯನ್ನು ರಚಿಸುವ ಸಾಧ್ಯತೆಯಿದೆ.

ಮಾಜಿ ಹಂಗಾಮಿ ಅಧ್ಯಕ್ಷ ಬೆರೆಸ್ ಫೋರ್ಡ್ ವಿಲಿಯಮ್ಸ್ ಸೇರಿದಂತೆ ಆರು ನಿರ್ದೇಶಕರು ರವಿವಾರ ನಡೆದ ಸಭೆಯ ನಂತರ ರಾಜೀನಾಮೆ ನೀಡಿದ್ದರು. ಉಳಿದವ ನಾಲ್ವರು ಸೋಮವಾರ ಮಂಡಳಿಯನ್ನು ತ್ಯಜಿಸಿದರು.

ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಹಿತಾಸಕ್ತಿಯನ್ನು ಪೂರೈಸುವ ಸಲುವಾಗಿ ಸದಸ್ಯರ ಮಂಡಳಿಯು ಉದ್ದೇಶಪೂರ್ವಕವಾಗಿ ತೀರ್ಮಾನಿಸಿದ ಬಳಿಕ ಇಡೀ ಮಂಡಳಿಯು ರಾಜೀನಾಮೆ ನೀಡಬೇಕಾಯಿತು. ಎಲ್ಲ ಸ್ವತಂತ್ರ ಹಾಗೂ ಸ್ವತಂತ್ರೇತರ ನಿರ್ದೇಶಕರು ಈಗ ರಾಜೀನಾಮೆ ನೀಡಿದ್ದಾರೆ ಎಂದು ಸಿಎಸ್ ಎ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News