'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ ಹಾರ್ದಿಕ್ ಪಾಂಡ್ಯ

Update: 2020-10-26 14:30 GMT

ಅಬುಧಾಬಿ: ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್'(ಬಿಎಲ್ ಎಂ) ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ ಮೊದಲ ಆಟಗಾರ ಎನಿಸಿಕೊಂಡರು.

ರವಿವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ವಿಶ್ವದಲ್ಲಿ ಭಾರೀ ಸುದ್ದಿಯಾಗಿರುವ ಬಿಎಲ್ಎಂ ಚಳುವಳಿಗೆ ಬೆಂಬಲ ಸೂಚಕವಾಗಿ ಮಂಡಿಯೂರಿ ಕುಳಿತರು.

ಗುಜರಾತ್  ಆಟಗಾರ ಪಾಂಡೆ ಕೇವಲ 21 ಎಸೆತಗಳಲ್ಲಿ 60 ರನ್ ಗಳಿಸಿದರು. 19ನೇ ಓವರ್ ನಲ್ಲಿ ಅರ್ಧ ಶತಕ ತಲುಪಿದ ತಕ್ಷಣ  ಒಂದು ಮಂಡಿಯನ್ನು ನೆಲಕ್ಕೆ ಊರಿ ಬಲಗೈ ಮೇಲಕ್ಕೆತ್ತಿ ಜನಾಂಗೀಯ ನಿಂದನೆ ವಿರುದ್ಧ ಚಳುವಳಿಗೆ ಏಕತೆ ಪ್ರದರ್ಶಿಸಿದರು.

ವೆಸ್ಟ್ಇಂಡೀಸ್ ಆಲ್ ರೌಂಡರ್ ಹಾಗೂ ಮುಂಬೈನ ಹಂಗಾಮಿ ನಾಯಕ ಕಿರೊನ್ ಪೊಲಾರ್ಡ್ ಬಲ ಮುಷ್ಠಿಯನ್ನು ಎತ್ತಿ ಪ್ರತಿಕ್ರಿಯಿಸಿದರು.

ಪಂದ್ಯ ಮುಗಿದ ಬಳಿಕ ಒಂದು ಮಂಡಿವೂರಿ ಕುಳಿತಿರುವ ಚಿತ್ರವನ್ನು ಸ್ವತಃ ಟ್ವಿಟರ್ ನಲ್ಲಿ ಹಾಕಿರುವ ಪಾಂಡ್ಯ  ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಎಂದು ಬರೆದಿದ್ದಾರೆ.

ಕಳೆದ ವಾರ ವೆಸ್ಟ್ ಇಂಡೀಸ್ ನ ಟೆಸ್ಟ್ ನಾಯಕ ಸನ್ ರೈಸರ್ಸ್ ಹೈದರಾಬಾದ್ ಪ್ರತಿನಿಧಿಸುತ್ತಿರುವ ಜೇಸನ್ ಹೋಲ್ಡರ್ ಐಪಿಎಲ್ ನ ಯಾವ ತಂಡಗಳು ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳುವಳಿಗೆ ಏಕತೆ ಪ್ರದರ್ಶಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News