ಪಂಜಾಬ್ ಗೆಲುವಿಗೆ 150 ರನ್ ಗುರಿ ನೀಡಿದ ಕೋಲ್ಕತಾ

Update: 2020-10-26 16:28 GMT

ಶಾರ್ಜಾ: ಮುಹಮ್ಮದ್ ಶಮಿ ನೇತೃತ್ವದ ಪಂಜಾಬ್ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ಹೊರತಾಗಿಯೂ ಆರಂಭಿಕ ಆಟಗಾರ ಶುಭಮನ್ ಗಿಲ್ (57, 45 ಎಸೆತ) ಹಾಗೂ ನಾಯಕ ಇಯಾನ್ ಮೊರ್ಗನ್(40,25 ಎಸೆತ)ಸಾಹಸದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 149 ರನ್ ಗಳಿಸಿತು. ಪಂಜಾಬ್ ಗೆಲುವಿಗೆ 150 ರನ್ ಗುರಿ ನೀಡಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕೋಲ್ಕತಾ ಮೊದಲ ಓವರ್ ನ 2ನೇ ಎಸೆತದಲ್ಲಿ ನಿತೀಶ್ ರಾಣಾ(0)ವಿಕೆಟನ್ನು ಕಳೆದುಕೊಂಡಿತು. ರಾಹುಲ್ ತ್ರಿಪಾಠಿ (7) ಹಾಗೂ ದಿನೇಶ್ ಕಾರ್ತಿಕ್(0)ಪೆವಿಲಿಯನ್ ಗೆ ಪರೇಡ್ ನಡೆಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 81 ರನ್ ಸೇರಿಸಿದ ಗಿಲ್ ಹಾಗೂ ಮೊರ್ಗನ್ ತಂಡ ಗೌರವಾರ್ಹ ಮೊತ್ತ ತಲುಪಲು ನೆರವಾದರು.

ಗಿಲ್ 45 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಗಳ ಸಹಿತ 57 ರನ್ ಗಳಿಸಿದರು. ಮೊರ್ಗನ್ 25 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಗಳಿದ್ದ 40 ರನ್ ಗಳಿಸಿ ಔಟಾದರು. ಔಟಾಗದೆ 24 ರನ್ (13 ಎಸೆತ, 3 ಬೌಂಡರಿ. 1 ಸಿಕ್ಸರ್ )ತಂಡದ ಮೊತ್ತವನ್ನು 149ಕ್ಕೆ ತಲುಪಿಸಿದರು. ಪಂಜಾಬ್  ಪರ ಶಮಿ(3-35) ಯಶಸ್ವಿ ಬೌಲರ್ ಎನಿಸಿಕೊಂಡರು. ಜೋರ್ಡನ್(2-25) ಹಾಗೂ ಬಿಷ್ಣೋಯ್ (2-20) ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News